ಇತರರನ್ನು ಬದುಕಲು ಬಿಡುವುದು ನಿಜವಾದ ಮಾನವೀಯ ಧರ್ಮ ದುರ್ಗಲಾಪು ಧರ್ಮನೇಮ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ

ಕೊಣಾಜೆ: ನಮ್ಮ ದೇಶದ ಸೂತ್ರ ಯಾವುದೆಂದರೆ ಧರ್ಮ. ಇಂತಹ ಸುಂದರವಾದ ಸಮಾಜದಲ್ಲಿ ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಅಲ್ಲಲ್ಲಿ ಕೆಲವು ಗೊಂದಲಮಯ ವಾತಾವರಣ ಸೃಷ್ಟಿಯಾಗುತ್ತಿದ್ದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದಿರುವುದು ಅದಕ್ಕೆ ಮುಖ್ಯ ಕಾರಣವಾಗಿದೆ. ನಾವು ಬದುಕುತ್ತಾ ಇತರರನ್ನು ಬದುಕಲು ಬಿಡುವುದು ನಿಜವಾದ ಮಾನವೀಯ ಧರ್ಮ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಕಣಂತೂರು ಶ್ರೀ ಧರ್ಮಅರಸು ತೋಡಕುಕ್ಕಿನಾರ್ ದೈವಸ್ಥಾನ, ದುರ್ಗಲಾಪು ಶಿ್ರೀ ದುರ್ಗಾಲಯ ದೈವಸ್ಥಾನದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಪೈಚಿಲ್ ಧರ್ಮನೇಮದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಅವರು ಮಾತನಾಡಿದರು.
ನೇತ್ರಾವತಿಯನ್ನು ತಿರುಗಿಸುವುದರಿಂದಲೇ ತುಳುನಾಡಿನ ಮಣ್ಣಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದು ಇದೀಗ ತಿರುವಿಗೆ ಯೋಜನೆ ಹಾಕಿಕೊಂಡ ಪ್ರದೇಶದಲ್ಲಿ ನೀರು ಸಿಗದಿರುವುದರಿಂದ ಅಧಿ ಕಾರಿಗಳು ಜೀವನದಿ ನೇತ್ರಾವತಿ ಬುಡಕ್ಕೆ ಬರುವ ಸಾಧ್ಯತೆ ಇದ್ದು ತುಳುನಾಡಿನ ನೀರಿನ ಬರ ನೀಗಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಸದಾ ಇರಲಿ ಎಂದು ಎಚ್ಚರಿಸಿದರು.
ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಮಾತನಾಡಿ ಇಂದಿನ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ ಇದರಲ್ಲಿ ಪೋಷಕರ ಪಾತ್ರವೂ ಪ್ರಮುಖವಾದುದು. ಆದ್ದರಿಂದ ಪ್ರಮುಖವಾಗಿ ಯುವ ಸಮುದಾಯದಲ್ಲಿ, ಮಕ್ಕಳಲ್ಲಿ ಧರ್ಮ, ಸಂಸ್ಕೃತಿಯ ರಕ್ಷಣೆಯ ಜಾಗೃತಿಯನ್ನು ಹುಟ್ಟಿಸುವ ಅಗತ್ಯತೆ ಇದೆ. ಧರ್ಮನೇಮದ ಮೂಲಕ ಧರ್ಮದೈವಗಳು ನಮ್ಮ ಧರ್ಮವನ್ನು ಕಾಪಾಡುವುದರೊಂದಿಗೆ ನಾಡಿನ ಒಳಿತನ್ನು ಖಂಡಿತಾ ಮಾಡುತ್ತವೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ನಾರ್ಯಗುತ್ತು ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ಶ್ರೀ ಕ್ಷೇತ್ರ ಕೂಟತ್ತಜೆಯ ಆಡಳಿತ ಮೊಕ್ತೇಸರ ಎ. ಶೈಲೇಂದ್ರ ಭರತ್ ನಾಕ್,
ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ಕೆ. ಪುರುಷೋತ್ತಮ್ ದತ್ತನಗರ, , ದೇವಿಪ್ರಸಾದ್ ಪೊಯ್ಯತ್ತಾಯ ಪೊಯ್ಯತ್ತಬೈಲ್, ಶ್ರೀ ಕ್ಷೇತ್ರ ಕೂಟತ್ತಜೆಯ ಮಾಜಿ ಆಡಳಿತ ಮೊಕ್ತೇಸರ ಅಡೇಕಳ ಶಂಕರ ಮೋಹನ ಪೂಂಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ರೈ ಬೋಳಿಯಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. . ಸಾಂಸ್ಕ ೃತಿಕ ಸಮಿತಿ ಸಂಚಾಲಕ ಚಂದ್ರಹಾಸ ಕಣಂತೂರು ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕೆ. ಚೌಟ ವಂದಿಸಿದರು.
ಬಳಿಕ ಉಳ್ಳಾಲ್ತಿ ನೇಮ, ದುರ್ಗಾಲಯ ಕೂಡಾ ಐವರು ಬಂಟರ ನೇಮ ನಡೆಯಿತು.





