ಬೆಳ್ತಂಗಡಿ: ವ್ಯಕ್ತಿಗೆ ತಂಡದಿಂದ ಹಲ್ಲೆ
ಉಪ್ಪಿನಂಗಡಿ, ಮಾ.18: ಮನೆಗೆ ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ಇಬ್ಬರ ತಂಡವೊಂದು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಅಜಿರ ನಿವಾಸಿ ಪುರಂದರ (20) ಎಂಬವರು ಹಲ್ಲೆಗೊಳಗಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಡಿಕೆ ಸುಲಿಯುವ ವೃತ್ತಿ ನಡೆಸುವ ಇವರು ಮಾ.16ರಂದು ಸಂಜೆ ಕೆಲಸ ಮುಗಿಸಿಕೊಂಡು ಬನ್ನೆಂಗಳದಿಂದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಬೈಕ್‌ನಲ್ಲಿ ಬಂದ ರಮೇಶ್ ಹಾಗೂ ಶೀನಪ್ಪ ಎಂಬವರು ಪುರಂದರರನ್ನು ತಡೆದು ನಿಲ್ಲಿಸಿ, ಜೀವಬೆದರಿಕೆಯೊಡ್ಡಿದಲ್ಲದೆ, ದೊಣ್ಣೆಯಿಂದ ಹೊಡೆಯಲು ಬಂದರು ಎನ್ನಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





