ವಿದೇಶಕ್ಕೆ ಹಾರಿದ ಮುಶರ್ರಫ್
ಇಸ್ಲಾಮಾಬಾದ್, ಮಾ. 18: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್ ಇಂದು ಬೆಳಗ್ಗೆ ವಿದೇಶಕ್ಕೆ ಪ್ರಯಾಣಿಸಿದರು. ವಿದೇಶಕ್ಕೆ ಹೋಗಲು ಅವರಿಗೆ ಸರಕಾರ ಅನುಮತಿ ನೀಡಿದ ಒಂದು ದಿನದ ಬಳಿಕ ಚಿಕಿತ್ಸೆಗಾಗಿ ಅವರು ದುಬೈಗೆ ಹಾರಿದರು.
‘‘ನಾನೋರ್ವ ಕಮಾಂಡೊ. ನಾನು ನನ್ನ ತಾಯ್ನಡನ್ನು ಪ್ರೀತಿಸುತ್ತೇನೆ. ಕೆಲವು ವಾರಗಳು ಅಥವಾ ತಿಂಗಳುಗಳ ಬಳಿಕ ನಾನು ವಾಪಸಾಗುವೆ’’ ಎಂದು ಮುಶರ್ರಫ್ ಹೇಳಿದ್ದಾರೆಂದು ‘ಡಾನ್’ ವರದಿ ಮಾಡಿದೆ.
72 ವರ್ಷದ ಮುಶರ್ರಫ್ ವಿರುದ್ಧ 2013ರಿಂದ ದೇಶದ್ರೋಹದ ಮೊಕದ್ದಮೆ ನಡೆಯುತ್ತಿದೆ. ಅವರು ವಿದೇಶ ಪ್ರಯಾಣಿಸುವುದನ್ನು 2014ರಲ್ಲಿ ಸರಕಾರ ನಿಷೇಧಿಸಿತ್ತು. ಸರಕಾರದ ಈ ನಿರ್ಧಾರವನ್ನು ಸಿಂಧ್ ಹೈಕೋರ್ಟ್ ಅದೇ ವರ್ಷ ರದ್ದುಪಡಿಸಿತ್ತು
ಸುಪ್ರೀಂ ಕೋರ್ಟ್ ಬುಧವಾರ ಸಿಂಧ್ ಹೈಕೋರ್ಟ್‌ನ ನಿರ್ಧಾರವನ್ನು ಎತ್ತಿಹಿಡಿಯಿತು.
Next Story





