ಗಿನಿಯಲ್ಲಿ ಮತ್ತೆ ಕಾಣಿಸಿಕೊಂಡ ಎಬೋಲ: 2 ಸಾವು
ಕೊನಾಕ್ರಿ (ಗಿನಿ), ಮಾ. 18: ಗಿನಿ ದೇಶದಲ್ಲಿ ಎಬೋಲದಿಂದಾಗಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ ಎಂದು ಸರಕಾರ ಗುರುವಾರ ಹೇಳಿದೆ. ನೆರೆಯ ಸಿಯರಾ ಲಿಯೋನ್‌ನಲ್ಲಿ ಎಬೋಲ ರೋಗವನ್ನು ನಿಯಂತ್ರಿಸಲಾಗಿದೆ ಎಂಬುದಾಗಿ ವಿಶ್ವಸಂಸ್ಥೆ ಘೋಷಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಇಬ್ಬರು ರೋಗಿಗಳಿಂದ ಸಂಗ್ರಹಿಸಿಲಾದ ಮಾದರಿಗಳಲ್ಲಿ ಎಬೋಲ ಹೇಮರೇಜಿಕ್ ಫೀವರ್ ವೈರಸ್‌ನ ಉಪಸ್ಥಿತಿ ಕಂಡುಬಂದಿದೆ ಎಂದು ಸರಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





