2016-17ನೆ ಸಾಲಿನಲ್ಲಿ ವಾರ್ತಾ ಇಲಾಖೆಗೆ ಒಟ್ಟಾರೆಯಾಗಿ 156 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
-ಡಾ. ಬಿ.ಆರ್. ಅಂಬೇಡ್ಕರ್‌ರವರ 125ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಅವರ ಬದುಕು ಮತ್ತು ಸಾಧನೆಗಳನ್ನು ಬಿಂಬಿಸುವ ಧ್ವನಿ-ಬೆಳಕು ಪ್ರದರ್ಶನವನ್ನು ಎಲ್ಲಾ ಜಿಲ್ಲೆಗಳಲ್ಲಿ ಆಯೋಜನೆ.
-ರಾಜ್ಯ ಏಕೀಕರಣದ 60ನೇ ವರ್ಷಚರಣೆಯ ಅಂಗವಾಗಿ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ ಧ್ಯೇಯಗೀತೆಯ ರಚನೆ, ದೃಶ್ಯ ಸಂಯೋಜನೆ, ಅಪರೂಪದ ಛಾಯಾಚಿತ್ರ ಪ್ರದರ್ಶನ ಮತ್ತು ಲೇಸರ್ ಪ್ರದರ್ಶನಗಳ ಆಯೋಜಿನೆ.
-ಮಹಾತ್ಮ ಗಾಂಧಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ 3 ಕೋಟಿ ರೂ. ವೆಚ್ಚದಲ್ಲಿ ಮುಂದಿನ 2 ವರ್ಷಗಳಲ್ಲಿ ಗಾಂಧಿ ಭವನಗಳ ನಿರ್ಮಾಣ.
- ಕನ್ನಡ ಚಿತ್ರರಂಗದ ಪ್ರಗತಿಯನ್ನು ದಾಖಲಿಸುವ ಅತ್ಯುತ್ತಮ ಕಥಾ ಚಿತ್ರಗಳು, ಸಾಕ್ಷ್ಯಚಿತ್ರಗಳು, ಆತ್ಮಕಥಾ ಚಿತ್ರಗಳು ಇತ್ಯಾದಿ ಎಲ್ಲಾ ಬಗೆಯ ಚಿತ್ರಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿಡಲು ವಾರ್ತಾ ಇಲಾಖೆಯಲ್ಲಿ ಸುಸಜ್ಜಿತ ಚಲನಚಿತ್ರ ಭಂಡಾರವನ್ನು ಸ್ಥಾಪನೆ.
- 2016-17ನೇ ಸಾಲಿನಿಂದ ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೆ
ಪ್ರೋತ್ಸಾಹ ನೀಡಲಾಗುವುದು.
- ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡುತ್ತಿರುವ ಮಾಶಾಸನವನ್ನು ರೂ.6,000 ದಿಂದ ರೂ.8,000ವರೆಗೆ ಹೆಚ್ಚಳ.





