ಆರೋಗ್ಯಇಲಾಖೆಗೆ 5032 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಟ್ಟಾರೆ 5032 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಆತ್ಮಹತ್ಯೆ ಒಳಗಾದ ರೈತರ ಕುಟುಂಬಗಳಿಗೆ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲು ‘ಇಂದಿರಾ ಸುರಕ್ಷಾ’ ಯೋಜನೆ ಜಾರಿಗೊಳಿಸಲಾಗುವುದು.
ಜಿಲ್ಲಾ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ ಸ್ವಚ್ಛ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವನ್ನು ಹಾಗೂ ರೋಗಿಗಳ ಕುಟುಂಬದವರಿಗೆ ತಂಗುದಾಣ ನಿರ್ಮಿಸಲಾಗುವುದು.
‘ಆಪದ್ಭಾದವ’ ಯೋಜನೆಯಡಿ ರಾಷ್ಟ್ರೀಯ ಮತ್ತು ರಾಜ್ಯದ ಹೆದ್ದಾರಿಗಳಲ್ಲಿ ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ರಾಜ್ಯದ 5 ಸ್ಥಳಗಳಲ್ಲಿ ಅಪಘಾತ ಚಿಕಿತ್ಸಾ ಕೇಂದ್ರಗಳನ್ನು 52.96 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಡಯಾಲಿಸಿಸ್ ಯೋಜನೆಯಡಿಯಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ವಿಶೇಷ ಡಯಾಲಿಸಿಸ್ ಘಟಕವನ್ನು 4.49ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಸಂಚಾರಿ ಆರೋಗ್ಯ ಹಾಗೂ ಮೊಬೈಕ್ ಕ್ಲಿನಿಕ್ ಸೇವೆ ಅಡಿಯಲ್ಲಿ ಆಸ್ಪತ್ರೆ ಸೌಲಭ್ಯ ಹಾಗೂ ಸಂಚಾರಿ ವ್ಯವಸ್ಥೆ ಇಲ್ಲದ ಹಳ್ಳಿಗಳಿಗೆ ಆರೋಗ್ಯ ಘಟಕ ಸ್ಥಾಪನೆ.
ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ 50 ಹಾಸಿಗೆಗಳ ಹಾಗೂ ದಾಂಡೇಲಿ, ಚಿಂಚೋಳಿ ಹಾಗೂ ಟಿ.ನರಸೀಪುರದಲ್ಲಿ 10 ಹಾಸಿಗೆಗಳ ಜಿಲ್ಲಾ ಆಯುಷ್ ಇಂಟಿಗ್ರೇಟೆಡ್ ಆಸ್ಪತ್ರೆಗಳ ಸ್ಥಾಪನೆ.
ಮೈಸೂರು ನಗರದಲ್ಲಿ 60 ಕೋಟಿ ರೂ.ಗಳ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಸ್ಥಾಪನೆ.
ಬೆಂಗಳೂರು ಸರಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಿಳಾ ವಿದ್ಯಾರ್ಥಿನಿಲಯದ ಸ್ಥಾಪನೆ.





