ಜೆಎನ್‌ಯು ಪ್ರಕರಣ: ಅನಿರ್ಬಣ್, ಉಮರ್‌ಗೆ ಜಾಮೀನು

ಹೊಸದಿಲ್ಲಿ,ಮಾ.18: ದೇಶದ್ರೋಹದ ಆರೋಪದಲ್ಲಿ ಬಂಧಿಸ ಲ್ಪಟ್ಟಿದ್ದ ದಿಲ್ಲಿಯು ಜೆಎನ್‌ಯು ವಿವಿಯ ವಿದ್ಯಾರ್ಥಿಗಳಾದ ಅನಿರ್ಬಣ್ ಹಾಗೂ ಉಮರ್ ಅವರಿಗೆ ಸ್ಥಳೀಯ ನ್ಯಾಯಾಲಯವು ಶುಕ್ರವಾರ ಜಾಮೀನು ಬಿಡುಗಡೆ ನೀಡಿದೆ.
ಸಂಸತ್‌ಭವನ ದಾಳಿ ಪ್ರಕರಣದಲ್ಲಿ ಅಫ್ಝಲ್‌ಗುರು ಗಲ್ಲಿಗೇರಿಸಿರುವುದನ್ನು ವಿರೋಧಿಸಿ ನಡೆದ ವಿವಾದಿತ ಕಾರ್ಯಕ್ರಮದಲ್ಲಿ ಶಾಮೀಲಾದ ಆರೋಪದಲ್ಲಿ ಇವರಿಬ್ಬರನ್ನು ಕಳೆದ ತಿಂಗಳು ದಿಲ್ಲಿ ಪೊಲೀಸರು ಬಂಧಿಸಿದ್ದರು. ಇವರ ಪೈಕಿ ಉಮರ್ ಖಾಲಿದ್ ಕಾರ್ಯಕ್ರಮದ ಮುಖ್ಯ ಸಂಘಟಕರಲ್ಲೊಬ್ಬರೆಂದು ಆರೋಪಿಸಲಾಗಿತ್ತು.
ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿ ದೇಶದ್ರೋಹದ ಆರೋಪದಲ್ಲಿ ಫೆ.9ರಂದು ಬಂಧಿಸಲ್ಪಟ್ಟಿದ್ದ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ನಾಯಕ ಕನ್ಹಯ್ಯಾ ಕುಮಾರ್‌ಗೆ ಮಾರ್ಚ್ ಆರಂಭದಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ಬಿಡುಗಡೆ ನೀಡಿತ್ತು.
Next Story





