ಮಹಿಳೆಯರ ಟ್ವೆಂಟಿ-20: ಕಿವೀಸ್‌ಗೆ ಭರ್ಜರಿ ಜಯ

ಚಂಡೀಗಡ, ಮಾ.18: ಮಹಿಳೆಯರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ತಂಡ ಐರ್ಲೆಂಡ್‌ನ ವಿರುದ್ಧ 93 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 177 ರನ್ ಗಳಿಸಿತು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಐರ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಕೇವಲ 84 ರನ್ ಗಳಿಸಲಷ್ಟೇ ಶಕ್ತವಾಗಿ ಹೀನಾಯ ಸೋಲುಂಡಿತು.
ಕಿವೀಸ್‌ನ ಪರ ಅರ್ಧಶತಕ(82 ರನ್, 60 ಎಸೆತ, 7 ಬೌಂಡರಿ, 2 ಸಿಕ್ಸರ್) ಬಾರಿಸಿದ್ದ ಆರಂಭಿಕ ಆಟಗಾರ್ತಿ ಬೇಟ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕಿವೀಸ್‌ನ ಪರ ಡಿವೈನ್(47) ಎರಡಂಕೆಯ ಸ್ಕೋರ್ ದಾಖಲಿಸಿದ್ದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 177/3
(ಬೇಟ್ಸ್ 82,ಡಿವೈನ್ 47, ಜಾಯ್ಸ್ 1-37)
ಐರ್ಲೆಂಡ್: 20 ಓವರ್‌ಗಳಲ್ಲಿ 84/5
(ಜಾಯ್ಸ 28, ಲಿವಿಸ್ ಔಟಾಗದೆ 16, ಬರ್ಮಿಂಗ್‌ಹ್ಯಾಮ್ 2-17)
Next Story







