ಇಂಡಿಯನ್ ವೇಲ್ಸ್ ಟೂರ್ನಿ: ಅಝರೆಂಕಾ ಸೆಮಿಫೈನಲ್‌ಗೆ
ಇಂಡಿಯನ್ ವೇಲ್ಸ್, ಮಾ.18: ಸ್ಲೋವಾಕಿಯದ ಮಗ್ಡಾಲೆನಾ ರಿಬಾರಿಕೊವಾರನ್ನು 6-0, 6-0 ನೇರ ಸೆಟ್‌ಗಳಿಂದ ಮಣಿಸಿದ ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯಾ ಅಝರೆಂಕಾ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಎರಡು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಅಝರೆಂಕಾ 2012ರಲ್ಲಿ ಮರಿಯಾ ಶರಪೋವಾರನ್ನು ಮಣಿಸಿ ಇಂಡಿಯನ್ ವೇಲ್ಸ್ ಕಿರೀಟ ಧರಿಸಿದ್ದರು.
ಅಝರೆಂಕಾ ಮುಂದಿನ ಸುತ್ತಿನಲ್ಲಿ 18ನೆ ಶ್ರೇಯಾಂಕದ ಕಾರೊಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ.
Next Story





