ಭಟ್ಕಳ: ಅಪಘಾತರ ರಹಿತ ಚಾಲನೆ; ದೇವೇಂದ್ರ ನಾಯ್ಕರಿಗೆ ಚಿನ್ನದ ಪದಕ

ಭಟ್ಕಳ: ವಾಯುವ್ಯ ಕರ್ನಟಕ ರಸ್ತೆ ಸಾರಿಗೆ ಸಂಸ್ಥೆ, ಉತ್ತರಕನ್ನಡ ಸಿರಸಿ ವಿಭಾಗದಲ್ಲಿ ಚಾಲಕರಾಗಿ ಸೇವೆಸಲ್ಲಿದ ಭಟ್ಕಳ ತಾಲೂಕಿನ ಮುರುಡೇಶ್ವರದ ದೇವೇಂದ್ರ ನಾಯ್ಕ 2008 ರಿಂದ 2015 ನೇ ಸಾಲಿನ, ಅಪಘಾತ ರಹಿತ ಚಾಲನೆಗಾಗಿ ನೀಡಲ್ಪಡುವ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಾ.23ರಂದು ಬೆಂಗಳೂರಿನಲ್ಲಿ ಜರಗುವ ಸಮಾರಂಭವೊಂದರಲ್ಲಿ ಈ ಚಿನ್ನದ ಪದಕ ವಿತರಿಸಲಾಗುತ್ತಿದ್ದು, ಮುರ್ಡೇಶ್ವರದ ದೇವೇಂದ್ರ ನಾಯ್ಕ ರವರು ‘ಚಿನ್ನದ ಪದಕ’ ಪಡೆಯಲಿದ್ದಾರೆ. ಸಂಸ್ಥೆಯಿಂದ ಸ್ವಯಂ ನಿವೃತ್ತಿ ಹೊಂದಿದ ಇವರು ನಿವೃತಿಯ ನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿದ್ದರೂ ಕೂಡಾ, ಸಾಮಾಜಿಕ ವೃತ್ತಿಯಲ್ಲಿ ನಾಟಿ ವೈದ್ಯರಾಗಿ ಪ್ರಸಿದ್ಧಿ ಹೊಂದಿದ್ದಾರೆ. ಮುಖ್ಯಮಂತ್ರಿಗಳ ‘ಬಂಗಾರದ ಪದಕ’ಕ್ಕೆ ಇವರನ್ನು ಆಯ್ಕೆ ಮಾಡಿರುವ ಬಗ್ಗೆ , ರಸ್ತೆ ಸಾರಿಗೆ ಸಂಸ್ಥೆಗೆ, ಸ್ಥಳೀಯ ಸಂಘ- ಸಂಸ್ಥೆಗಳು ಅಭಿನಂದಿನೆ ಸಲ್ಲಿಸಿ, ಇವರಿಗೆ ಶುಭ ಹಾರೈಸಿದ್ದಾರೆ.
Next Story





