ಮಂಗಳೂರು: 2015 ನೇ ಸಾಲಿನ ಎಕ್ಸಲೆಂಟ್ ಇಂಜಿನಿಯರಿಂಗ್ ಕಾಲೇಜ್ ಇನ್ ಕರ್ನಾಟಕ ಗೌರವ ಪ್ರಶಸ್ತಿ
ಮಂಗಳೂರು: ಕೆಂಜಾರಿನ ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯ

ಬಜಪೆ, ಮಾ.19: ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಬೆಳಗಾವಿ ಹಾಗೂ ಸಿಎಂಎಐ ಅಸೋಸಿಯೇಶನ್‌ನ ಕೊಡಮಾಡುವ 2015 ನೇ ಸಾಲಿನ ಎಕ್ಸಲೆಂಟ್ ಇಂಜಿನಿಯರಿಂಗ್ ಕಾಲೇಜ್ ಇನ್ ಕರ್ನಾಟಕ ಗೌರವವನ್ನು ಮಂಗಳೂರು ಕೆಂಜಾರಿನ ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯ ಪಡೆದು ಕೊಂಡಿದೆ ಎಂದು ಶ್ರೀ ದೇವಿ ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೋ. ದಿಪೀಲ್ ಕುಮಾರ್ ತಿಳಿಸಿದರು. ಶನಿವಾರ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಮಾ.14 ರಂದು ಬೆಂಗಳೂರಿನ ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಪಿಜಿ ಸೆಂಟರ್‌ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಚ್ ಮಹೇಶ್ವರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 2ನೆ ರಾಷ್ಟ್ರೀಯ ಕರ್ನಾಟಕ ಶೃಂಗ ಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು ಎಂದರು.
ಸಮಾರಂಭದಲ್ಲಿ ರಾಜ್ಯ ದೊಡ್ಡ ಮತ್ತು ಮಧ್ಯಮ ಪ್ರಮಾಣ ಕೈಗಾರಿಕಾ ಮತ್ತು ಪ್ರವಾಸೋಧ್ಯಮ ಸಚಿವರಾಧ ಆರ್.ವಿ ದೇಶ ಪಾಂಡೆ, ಕಾಣೂನು ಸಂಸದೀಯ ವ್ಯವಹಾರಗಳ ಹಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ ಟಿ.ಬಿ. ಜಯಚಂದ್ರ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ. ಕೆ. ಸುಧಾಕರ್, ಸಿಎಂಎಐ ಅಸೋಸಿಯೇಶನ್‌ನ ಅಧ್ಯಕ್ಷ ಎನ್.ಕೆ. ಗೋಯಲ್ ಹಾಗೂ ತಾಂತ್ರಿಕ ಸಲಹೆಗಾರ ಹಾಗೂ ವಿಶೇಷಾಧಿಕಾರಿ ಟಿ. ಭಾಸ್ಕರ್ ಅವರ ಉಪಸ್ಥಿತಿಯಲ್ಲಿ ಗೌರವ ಸಮರ್ಪಣೆ ನಡೆಯಿತು ಎಂದರು.
ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯದ 2006 ರಲ್ಲಿ ಸ್ಥಾಪನೆ ಗೊಂಡಿದ್ದು ತನ್ನ ಶ್ರೇಷ್ಠತೆ, ಬೋಧನೆ, ಮೂಲ ಸೌಕರ್ಯ ಹಾಗೂ ಉದ್ಯೋಗ ಅವಕಾಶ ಸೇರಿದಂತೆ ವಿವಿಧ ವಿಷಯಗಳಲ್ಲಿ ಈಗಾಗಲೇ ಹಲವು ಶ್ರೇಷ್ಠ ಪ್ರಶಸ್ತಿ, ಗೌರವಗಳನ್ನು ತನ್ನದಾಗಿಸಿ ಕೊಂಡಿದೆ. ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಬೆಳಗಾವಿ ಹಾಗೂ ಸಿಎಂಎಐ ಅಸೋಸಿಯೇಶನ್‌ನ ಕೊಡಮಾಡುವ 2015 ನೇ ಸಾಲಿನ ಎಕ್ಸಲೆಂಟ್ ಇಂಜಿನಿಯರಿಂಗ್ ಕಾಲೇಜ್ ಇನ್ ಕರ್ನಾಟಕ ಗೌರವ ಸಂಸ್ಥೆಯ ಗೌರವವನ್ನು ಹೆಚ್ಚಿಸುವ ಜೊತೆಗೆ ಬಲಿಷ್ಠ ಶಿಕ್ಷಕ ವೃಂದವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ ಎಂದರು.
ಪ್ರತಿಕಾ ಗೋಷ್ಠಿಯಲ್ಲಿ ಶ್ರೀದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಉಪಾಧ್ಯಕ್ಷ ನಿಧಿಶ್ ಎಸ್. ಶೆಟ್ಟಿ, ನಿರ್ಮಲ್, ಸಂರ್ಸತೆಯ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಕೆ. ಉಪಸ್ಥಿತರಿದ್ದರು.





