ಕಾರ್ಕಳ: ಪರೀಕ್ಷಾ ಪೂರ್ವ ತರಬೇತಿ ಶಿಬಿರ
ಕಾರ್ಕಳ: ಜಮೀಯತುಲ್ ಫಲಾಹ್ ಕಾರ್ಕಳ ಘಟಕದ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ಶಿಬಿರವು ತೆಳ್ಳಾರು ಮಂಜುನಾಥ ಪೈ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ ಉಮೇಶ್ ಗೌತಮ್ ನಾಯ್ಕಾ ತರಬೇತಿ ನೀಡಿದರು. ಘಟಕದ ಅಧ್ಯಕ್ಷ ಅಶ್ಪಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೊಹಮ್ಮದ್ ಯಾಕೂಬ್, ಜತೆ ಕಾರ್ಯದರ್ಶಿ ಸೈಯದ್ ಹಸನ್, ಕೋಶಾಧಿಕಾರಿ ಸೈಯದ್ ಅಬ್ಬಾಸ್, ಸೈಯದ್ ಅಶ್ಪಾಕ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸವಿತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





