ಕಾರ್ಕಳ : ನಮನ ಫ್ರೆಂಡ್ಸ್ ವಾರ್ಷಿಕೋತ್ಸವ
ಕಾರ್ಕಳ ಕುಕ್ಕುಂದೂರು ಪಿಲಿಚಂಡಿಸ್ಥಾನ ನಮನ ಫ್ರೆಂಡ್ಸ್‌ನ ವಾರ್ಷಿಕೋತ್ಸವವು ಶನಿವಾರ ನಡೆಯಿತು. ಉದ್ಯಮಿ ವಿಜಯ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ತಾ.ಪಂ.ಮಾಜಿ ಸದಸ್ಯ ರವೀಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟಿ ರಕ್ಷಾ ಶೆಣೈ, ಉಪನ್ಯಾಸಕ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ಉದ್ಯಮಿ ತ್ರಿವಿಕ್ರಮ ಕಿಣಿ, ಜಿ.ಪಂ.ಸದಸ್ಯ ಸುಮಿತ್ ಶೆಟ್ಟಿ, ತಾ.ಪಂ.ಸದಸ್ಯ ಅಶೋಕ್ ಶೆಟ್ಟಿ, ಗ್ರಾ.ಪಂ.ಸದಸ್ಯ ಅನಿಲ್ ಪೂಜಾರಿ, ಸಂಘದ ಅಧ್ಯಕ್ಷ ರಾಜೇಂದ್ರ, ಗೌರವಧ್ಯಕ್ಷ ಮೈನಾಕರ ಶೆಟ್ಟಿ, ಕೋಶಾಧಿಕಾರಿ ಡಿ.ಈಶ್ವರ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಲೀಂ ಸ್ವಾಗತಿಸಿದರು. ಸುಪ್ರೀತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ವಂದಿಸಿದರು.
Next Story





