ಕಾರ್ಕಳ: ಬೀಳ್ಕೊಡುಗೆ ಸಮಾರಂಭ

ಕಾರ್ಕಳ: ಬಿಎಸ್‌ಎನ್‌ಎಲ್‌ನಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿ ಕಾರ್ಕಳದ ಗ್ರಾಹಕರ ಸೇವಾ ವಿಭಾಗದಲ್ಲಿ ನಿವೃತ್ತರಾದ ಉಮಾನಾಥಜೀ ಅವರಿಗೆ ಬೀಳ್ಕೊಡುಗೆ ಸಮಾರಂಭ ಸೋಮವಾರ ನಡೆಯಿತು.
ದೂರವಾಣಿ ಮನೋರಂಜನಾ ಕೂಟದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಶೋಧ ಆರ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾರ್ಕಳ ವಿಭಾಗದ ಎಜಿಎಂ ಎಚ್.ಸತ್ಯನಾರಾಯಣ ಉಪಾಧ್ಯ ಉಪಸ್ಥಿತರಿದ್ದರು. ಉಪಮಂಡಲ ಅಧಿಕಾರಿ ವಿಟ್ಟಲ್‌ದಾಸ್, ರಾಧಾ ಶರ್ಮಾ, ಮುರಳೀಧರ ಭಟ್, ಉಮಾನಾಥ್‌ಜೀ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಕೆ.ನಂಬಿಯಾರ್ ಸ್ವಾಗತಿಸಿದರು. ಗೋಪಾಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸುದರ್ಶನ್ ವಂದಿಸಿದರು.
Next Story





