ಕಾರ್ಕಳ: ನಿಟ್ಟೆ ವಿದ್ಯಾರ್ಥಿನಿ ಸ್ವಾತಿಗೆ ರಾಜ್ಯಮಟ್ಟದ ಪುರಸ್ಕಾರ

ಕಾರ್ಕಳ: ರಾಜ್ಯಮಟ್ಟದ ಅತ್ಯುತ್ತಮ ರಾ.ಸೇ.ಯೋ. ಸ್ವಯಂಸೇವಕ 2014-15 ಪುರಸ್ಕಾರಕ್ಕೆ ಡಾ ನಿಟ್ಟೆ ಶಂಕರ ಆಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಬಿಎಂ ವಿದ್ಯಾರ್ಥಿನಿ ಸ್ವಾತಿ ಪ್ರಭಾಕರ ಶೆಟ್ಟಿ ಆಯ್ಕೆಯಾಗಿದ್ದು, ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಪಠ್ಯ ಹಾಗು ಸಾಂಸ್ಕೃತಿಕ ರಂಗದಲ್ಲಿ ಮಿಂಚುತ್ತಿರುವ ಸ್ವಾತಿ ದೆಹಲಿಯಲ್ಲಿ ನಡೆದ 2015ರ 66ನೇ ಗಣರಾಜ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ತಮಿಳುನಾಡಿನಲ್ಲಿ ನಡೆದ ಮಿನಿ ಇಂಡಿಯಾ ರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಮೇಳಕ್ಕೂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. 2015ರ ಎಪ್ರಿಲ್ ನಲ್ಲಿ ಕಾಂಬೋಡಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಯುವಜನ ಸಾಂಸ್ಕೃತಿಕ ಹಬ್ಬದಲ್ಲಿ ಭಾರತದ 10 ಮಂದಿಯ ಗುಂಪಿನಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಇವರಿಗಿದೆ. ಮಂಗಳೂರು ವಿ.ವಿ.ಯಿಂದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂಸೇವಕ 2014-15 ಎಂಬ ಬಿರುದು ಲಭಿಸಿದೆ
Next Story





