ಉಳಿಯತ್ತಡ್ಕ -ಸೀತಾಂಗೋಳಿ ಹದೆಗೆಟ್ಟ ರಸ್ತೆ : ನಾಗರಿಕರಿಂದ ರಸ್ತೆ ತಡೆ
.jpg)
ಮಂಜೇಶ್ವರ : ಸಂಪೂರ್ಣವಾಗಿ ಹದಗೆಟ್ಟು ಸಾರಿಗೆ ಸಂಚಾರಕ್ಕೆ ಅಯೋಗ್ಯವಾಗಿರುವ ಉಳಿಯತ್ತಡ್ಕ-ಸೀತಾಂಗೋಳಿ ರಸ್ತೆಯನ್ನು ನವೀಕರಿಸದೆ ನಿರ್ಲಕ್ಷ್ಯವಹಿಸುತ್ತಿರುವ ಬಗ್ಗೆ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಕ್ರೀಯಾ ಸಮಿತಿ ಹಾಗೂ ನಾಗರಿಕರು ಶನಿವಾರ ಬೆಳಿಗ್ಗೆ ಉಳಿಯತ್ತಡ್ಕ ಜಂಕ್ಷನ್ ನಲ್ಲಿ ರಸ್ತೆ ತಡೆ ಚಳವಳಿಗೆ ಚಾಲನೆ ನೀಡಿದರು.
ಸಂಚಾರ ತಡೆ ಚಳವಳಿಯಿಂದ ಸೀತಾಂಗೋಳಿ-ವಿದ್ಯಾನಗರ ರಸ್ತೆಯಲ್ಲಿ ವಾಹನ ಸಂಚಾರ ನಿಲುಗಡೆಗೊಂಡಿತು.
ಶನಿವಾರ ಬೆಳಿಗ್ಗೆ ಆರಂಭಗೊಂಡ ಸಂಚಾರ ತಡೆ ಮಧ್ಯಾಹ್ನ ತನಕ ಮುಂದುವರಿಯಿತು.ರಾಘವನ್ ಮಾಸ್ಟರ್,ಅವಿನ್,ಶಂಕರ್,ಮೊಹಮ್ಮದ್ ಮಾಯಿಪ್ಪಾಡಿ,ರಿಲನ್ ಕುಮಾರ್,ಕುಂಞಿಕೋಯ ಮೊದಲಾದವರು ಚಳವಳಿ ನೇತೃತ್ವ ವಹಿಸಿದ್ದರು.ವಿದ್ಯಾನಗರ ಎಸ್‌ಐ ಅಜಿತ್ ಕುಮಾರ್ ನೇತೃತ್ವ ದ ಪೋಲೀಸರು ಸ್ಥಳಕ್ಕಾಗಮಿಸಿ ಸ್ಥಿತಿಗತಿಯ ಬಗ್ಗೆ ನಿಗಾ ವಹಿಸಿದ್ದರು.
Next Story





