ಇಂದಿನ ಪಂದ್ಯ ರದ್ದಾದರೆ ಭಾರತಕ್ಕೆ ಸೆಮಿಫೈನಲ್ ಸ್ಥಾನ ಕಷ್ಟ?

ಕೊಲ್ಕತ್ತಾ , ಮಾ. 19 : ಬಹುನಿರೀಕ್ಷಿತ ಭಾರತ - ಪಾಕಿಸ್ತಾನ ನಡುವಿನ ಈಡನ್ ಗಾರ್ಡನ್ ಪಂದ್ಯದ ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಮಳೆರಾಯ ನಿಲ್ಲುವ ಸೂಚನೆ ತೋರಿಸುತ್ತಿಲ್ಲ.ಕಲೆದ ರಾತ್ರಿ ಪ್ರಾರಂಭವಾದ ಮಳೆ ಇನ್ನೂ ನಿಂತಿಲ್ಲ. ಸೂರ್ಯ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ. ಹೀಗೆ ಮುಂದುವರಿದರೆ ಇಂದಿನ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚು. ಹಾಗಾದರೆ ಏನಾಗುತ್ತದೆ , ನೋಡೋಣ ಬನ್ನಿ .
ಈ ಕ್ಷಣ ಎರಡು ಪಂದ್ಯಗಳನ್ನು ಆಡಿರುವ ನ್ಯೂಜ್ಹಿಲ್ಯಾಂಡ್ ನಾಲ್ಕು ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಎರಡು ಅಂಕಗಳೊಂದಿಗೆ ಪಾಕ್ ಎರಡನೇ ಹಾಗು ಭಾರತ ಯಾವುದೇ ಅಂಕವಿಲ್ಲದೆ ನಾಲ್ಕನೇ ಸ್ಥಾನದಲ್ಲಿದೆ. ಆಸಿಸ್ ಹಾಗು ಬಾಂಗ್ಲಾ ಕೂಡ ಯಾವುದೇ ಅಂಕಗಳಿಲ್ಲದೆ ಕ್ರಮವಾಗಿ ಮೂರು ಹಾಗು ಐದನೇ ಸ್ಥಾನದಲ್ಲಿವೆ.
ಇಂದಿನ ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ ಒಂದೊಂದು ಅಂಕ ಪಡೆಯುತ್ತವೆ. ಆಗ ಪಾಕ್ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನ ಹಾಗು ಮೂರನೇ ಸ್ಥಾನಕ್ಕೆ ಏರುತ್ತವೆ. ಆದರೆ ಇವೆರಡೂ ತಂಡಗಳಿಗಿಂತ ಒಂದು ಪಂದ್ಯ ಕಡಿಮೆ ಆಡಿರುವ ಆಸಿಸ್ ಹಾಗು ಬಾಂಗ್ಲಾ ಸೊನ್ನೆ ಅಂಕಗಳೊಂದಿಗೆ ಇರುತ್ತವೆ. ಇದು ಸೆಮಿ ಫೈನಲ್ ತಲುಪುವ ಭಾರತದ ಹಾದಿಯನ್ನು ಇನ್ನಷ್ಟು ದುರ್ಗಮಗೊಳಿಸಲಿದೆ. ಆಗ ಭಾರತ ಆಸಿಸ್ ಹಾಗು ಬಾಂಗ್ಲಾ ಎರಡನ್ನೂ ಸೋಲಿಸಬೇಕು ಮಾತ್ರವಲ್ಲ ಇತರ ತಂಡಗಳ ಮೇಲೂ ಅವಲಂಬಿಸಬೇಕಾಗುತ್ತೆ. ಮಾರ್ಚ್ 23 ಕ್ಕೆ ಬೆಂಗಳೂರಿನಲ್ಲಿ ಆಸಿಸ್ ವಿರುದ್ಧ ಹಾಗು 27 ಕ್ಕೆ ಮೊಹಾಲಿಯಲ್ಲಿ ಬಾಂಗ್ಲಾ ವಿರುಧ ಭಾರತ ಆಡಲಿದೆ.
ಫೈನಲ್ ಗೆ ಬಿಟ್ಟು ಬೇರೆ ಯಾವುದೇ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಿಲ್ಲ.







