ಪುತ್ತೂರು: ನಗರದ ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿ ನಿಲ್ಲಿಸಲಾಗಿದ್ದ ಮೋಟಾರು ಬೈಕನ್ನು ಶುಕ್ರವಾರ ತಡ ರಾತ್ರಿ ಕಳವು ಮಾಡಿದ ಘಟನೆ ನಡೆದಿದೆ. ಕಳವಾದ ಯಮಹಾ ಬೈಕ್‌ನ ಮೌಲ್ಯ 50 ಸಾವಿರ ರೂ. ಗಳೆಂದು ಅಂದಾಜಿಸಲಾಗಿದೆ. ಬೈಕ್ ಮಾಲಕ ಮಹಮ್ಮದ್ ಶರೀಫ್ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.