ಜೈಲಿನಿಂದ ಬಿಡುಗಡೆಯಾದ ಮರುದಿನವೇ ಪ್ರಬಂಧ ಮಂಡಿಸಿದ ಉಮರ್ ಖಾಲಿದ್

ಹೊಸದಿಲ್ಲಿ,ಮಾ19:ದೇಶದ್ರೋಹದ ಆರೋಪದಲ್ಲಿ 3 ವಾರ ತಿಹಾರ್ ಜೈಲಿನಲ್ಲಿದ್ದ ಜೆ.ಎನ್.ಯು ವಿದ್ಯಾರ್ಥಿ ಬಿಡುಗಡೆಯಾದ ಮರುದಿನವೇ ವಿವಿಯಲ್ಲಿ ಪ್ರಬಂಧ ಮಂಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಜೆ.ಎನ್.ಯು ನ ದಿ ಸೆಂಟರ್ ಫಾರ್ ಹಿಸ್ಟಾರಿಕಲ್ ಸ್ಟಡೀಸ್(CHS)ನಿಂದ ಫೆಬ್ರವರಿ 18 ರಿಂದ 20ರ ವರೆಗೆ 'ಯಂಗ್ ಸ್ಕಾಲರ್ಸ್ ಕಾನ್ಫೆರೆನ್ಸ್' ನಡೆಯಬೆಕಿತ್ತು ಆದರೆ ಫೆ.9 ರ ಘಟನೆಯ ಬಳಿಕದ ವಿವಾದಗಳಿಂದಾಗಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.
ಇದೇ ಸಂಸ್ಥೆಯಲ್ಲಿ ಪಿ.ಎಚ್.ಡಿ ಮಾಡುತ್ತಿರುವ 28ರ ಹರೆಯದ ಉಮರ್ "Changing Village Authority in the Adivasi Hinterland: State, Community and Contingencies of Rule in Singhbhum (1830-1893)” ಎಂಬ ವಿಷಯದಲ್ಲಿ ತಮ್ಮ ಪ್ರಬಂಧವನ್ನು ಶನಿವಾರ ಮಂಡಿಸಿದ್ದಾರೆ.
‘ಉಮರ್ ತಮ್ಮ ಪ್ರಬಂಧ ಮಂಡಿಸಿದ್ದಾರೆ.ಅನಿರ್ಬನ್ ತನ್ನ ಪಿ.ಎಚ್.ಡಿ ಯ ಕೊನೆಯ ಭಾಗ ಬರೆಯಲು ಪ್ರಾರಂಭಿಸುತ್ತಾರೆ.ನಾವು ಜೆ.ಎನ್.ಯು ನಲ್ಲಿ ಇದನ್ನೆ ಮಾಡುತ್ತೇವೆ.
ನಾವು ಕಲಿಯುತ್ತೇವೆ ಮತ್ತು ಹೋರಾಟವನ್ನೂ ಮಾಡುತ್ತೇವೆ.ಬೀದಿಯಲ್ಲಿ ಹೋರಾಡಿ ಪೋಲೀಸರ ಜಲಫಿರಂಗಿಯನ್ನು ಎದುರಿಸುತ್ತೇವೆ.ವಾಪಾಸ್ ಬಂದು ಅಧ್ಯಯನ ಮಾಡುತ್ತೇವೆ.” ಎಂದು ಜೆ.ಎನ್.ಯು ವಿದ್ಯಾರ್ಥಿಯೊಬ್ಬ ಹೆಮ್ಮೆಯಿಂದ ಹೇಳಿದ್ದಾನೆ.





