ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಕೋಲ್ಕತಾ, ಮಾ.19: ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದ(ಔಟಾಗದೆ 55) ನೆರವಿನಿಂದ ಭಾರತ ತಂಡ ಪಾಕಿಸ್ತಾನ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10ರ ಗ್ರೂಪ್ 2ರ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದೆ. ಶನಿವಾರ ಇಲ್ಲಿನ ಐತಿಹಾಸಿಕ ಈಡನ್‌ಗಾರ್ಡನ್ ಸ್ಟೇಡಿಯಂನಲ್ಲಿ ಗೆಲುವಿಗೆ 18 ಓವರ್‌ಗಳಲ್ಲಿ 119 ರನ್ ಗುರಿ ಪಡೆದಿದ್ದ ಭಾರತ 15.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. ಭಾರತ 4.4 ಓವರ್‌ಗಳಲ್ಲಿ 23 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ(10) ಹಾಗೂ ಶಿಖರ್ ಧವನ್(6) ಬೇಗನೆ ಔಟಾದರು. ಸುರೇಶ್ ರೈನಾ ಖಾತೆ ತೆರೆಯಲು ವಿಫಲರಾದರು.
4ನೆ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿದ ವಿರಾಟ್ ಕೊಹ್ಲಿ (20) ಹಾಗೂ ಯುವರಾಜ್ ಸಿಂಗ್(24)ತಂಡವನ್ನು ಆಧರಿಸಿದರು. ಪಾಕಿಸ್ತಾನ ವಿರುದ್ಧ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಕೊಹ್ಲಿ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್‌ಗಳಿರುವ 50 ರನ್ ಪೂರೈಸಿದರು. ಪಾಕ್‌ನ ವೇಗದ ಬೌಲರ್ ಮುಹಮ್ಮದ್ ಸಮಿ(2-17) 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.





