ಎಮಿನೆಂಟ್ ಅಲೋಶಿಯನ್ ಅಲುಮ್ನಾಯ್ ಪ್ರಶಸ್ತಿ ಪ್ರದಾನ

ಮಂಗಳೂರು, ಮಾ.19: ಪ್ರತಿ 2 ವರ್ಷಗಳಿಗೊಮ್ಮೆ ನಗರದ ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘ(ಎಸ್‌ಎಸಿಎಎ)ದ ಸಹಯೋಗದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ನೀಡಲಾಗುವ ಎಮಿನೆಂಟ್ ಅಲೋಶಿಯನ್ ಅಲುಮ್ನಾಯ್ ಅವಾರ್ಡ್‌ನ್ನು ಶನಿವಾರ ಕಾಲೇಜಿನ ಎಲ್‌ಸಿಆರ್‌ಐ ಬ್ಲಾಕ್‌ನ ಫಾ.ಎಲ್.ಎಫ್.ರಸ್ಕಿನ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಐವರಿಗೆ ಪ್ರದಾನ ಮಾಡಲಾಯಿತು. ವಾಣಿಜ್ಯ ಮತ್ತು ನಿರ್ವಹಣೆ ವಿಷಯಗಳಲ್ಲಿ 100ಕ್ಕೂ ಅಧಿಕ ಅತ್ಯುತ್ತಮ ಪುಸ್ತಕಗಳನ್ನು ಬರೆದಿರುವ, ಕಾಲೇಜಿನಲ್ಲಿ 35 ವರ್ಷಗಳ ಕಾಲ ಉಪನ್ಯಾಸಕರಾಗಿ ಕರ್ತವ್ಯನಿರ್ವಹಿಸಿರುವ ಪ್ರೊ.ಬಿ.ಎಸ್.ರಾಮನ್, ಲಿಪಿತಜ್ಞ ನಾಡೋಜ ಡಾ.ಕೆ.ಪಿ.ರಾವ್, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಸೇರಿದಂತೆ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಖ್ಯಾತರಾಗಿರುವ ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್, ಹಿರಿಯ ಪರಿಸರ ಸಂರಕ್ಷಣಾ ವಿಜ್ಞಾನಿ ಡಾ.ಉಲ್ಲಾಸ್ ಕಾರಂತ್, ಹೆಸರಾಂತ ರಫ್ತು ಉದ್ಯಮಿ, ಎ್ಐಇಒ ದಕ್ಷಿಣ ಭಾರತ ವಲಯ ಅಧ್ಯಕ್ಷ ವಾಲ್ಟರ್ ಡಿಸೋಜರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ.ಾ.ಡೆಂಝಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರೆ.ಾ.ಸ್ವೀಬರ್ಟ್ ಡಿಸಿಲ್ವ ಅಭಿನಂದಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ರಿಚರ್ಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಮೈಕೆಲ್ ಡಿಸೋಜ ವಂದಿಸಿದರು.





