ಆಸ್ತಿ ವಿವಾದ: ನಾಲ್ವರ ಮೇಲೆ ಹಲ್ಲೆ
ಪಾಂಡವಪುರ, ಮಾ.19: ಆಸ್ತಿ ವಿಚಾರಕ್ಕೆ ಸಂಬಂಸಿದಂತೆ ಒಂದೇ ಕುಟುಂಬದ ನಾಲ್ವರ ಮೇಲೆ ಹಲ್ಲೆ ನಡೆದಿರುವ ಘಟನೆ ತಾಲೂಕಿನ ಹುಲ್ಕೆರೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹುಲ್ಕೆರೆ ಕೊಪ್ಪಲು ಗ್ರಾಮದ ರಾಮೇಗೌಡ, ಲಕ್ಷ್ಮಮ್ಮ, ನೇತ್ರಾ ಹಾಗೂ ಚೈತ್ರಾ ಹಲ್ಲೆಗೊಳಗಾಗಿದ್ದು, ಇವರಿಗೆ ಅದೇ ಗ್ರಾಮದ ಸವಲೇಗೌಡ ಎಂಬವರ ಮಗ ಚಂದ್ರ ಮತ್ತು ಆತನ ತಾಯಿ ಸುಶೀಲಮ್ಮ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.ನೆಯ ವಿವರ: ಸವಲೇಗೌಡ ಮತ್ತು ರಾಮೇಗೌಡ ಅಣ್ಣ ತಮ್ಮಂದಿರು. ಅವರಿಗೆ ತಮ್ಮ ತಾಯಿ ಲಕ್ಷ್ಮಮ್ಮ ಅವರಿಂದ ಬಂದ ಜಮೀನು ಈಗಾಗಲೇ ಭಾಗವಾಗಿದ್ದು, ಮಾ.18ರಂದು ರಾಮೇಗೌಡ ತನ್ನ ಭಾಗದ ಜಮೀನು ಅಳತೆ ಮಾಡಿಸಿಕೊಂಡರು. ವೇಳೆ ಸರ್ವೇ ಅಕಾರಿಗಳೊಂದಿಗೆ ಪೊಲೀಸರೂ ಸಹ ಹಾಜರಿದ್ದರು. ಅಳತೆಯಾದ ನಂತರ ಪೊಲೀಸರು ಮತ್ತು ಅಕಾರಿಗಳು ಹೋಗುವುದನ್ನೇ ಕಾಯುತ್ತಿದ್ದ ಸವಲೇಗೌಡರ ಮಗ ಚಂದ್ರ ತನ್ನ ತಾಯಿ ಸುಶೀಲಮ್ಮರವರೊಂದಿಗೆ ಸೇರಿಕೊಂಡು ಏಕಾಏಕಿ ರಾಮೇಗೌಡರ ಮನೆಗೆ ನುಗ್ಗಿ ರಾಮೇಗೌಡ ಮತ್ತು ಲಕ್ಷಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಹೋದ ನೇತ್ರಾ ಮತ್ತು ಚೈತ್ರಾ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸಂಬಂಧ ಪಾಂಡವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.





