ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಗೆ ಆಸ್ಪತ್ರೆಗಳ ನೋಂದಣಿ
ಮಂಗಳೂರು, ಮಾ.19: ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಆಗಬಹುದಾದ ವಿಳಂಬ, ತತ್‌ಕ್ಷಣದಲ್ಲಿ ಗಾಯಾಳುಗಳ ನೆರವಿಗೆ ಯಾರು ಮುಂದೆ ಬಾರದಿರುವುದು. ಚಿಕಿತ್ಸೆಯ ವೆಚ್ಚ ಭರಿಸಲು ಸಮಸ್ಯೆ ಕಾನೂನಿನ ತೊಡಕುಗಳು ಮುಂತಾದ ಕಾರಣಗಳಿಂದಾಗಿ ಅಪಘಾತದ ಗಾಯಾಳುಗಳಿಗೆ ಸರಿಯಾದ ಸಂಧರ್ಭದಲ್ಲಿ ಸೂಕತಿ ಚಿಕಿತ್ಸೆ ಲಬ್ಯವಾಗದೇ ಸಾವುಗಳ ಸಂಖ್ಯೆ ಅಧಿಕಗೊಳುತ್ತಿದೆ. ಈ ಎಲ್ಲ ಅಂಶಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅಪಘಾತಕ್ಕೊಳಗಾದ ವ್ಯಕಿತಿಯ ಜೀವವನ್ನು ರಕ್ಷಿಸಲು ಮೊದಲ 48 ಗಂಟೆಗಳ ಅವಧಿಗೆ ರೂ. 25 ಸಾವಿರವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ರಸ್ತೆ ಅಪಘಾತದ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವ ಸೌಲಭ್ಯಗಳನ್ನು ಹೊಂದಿರುವ ಆಸಕ್ತ ಆಸ್ಪತ್ರೆಗಳು, ಟ್ರಾಮ ಕೇಂದ್ರಗಳು ಸುವರ್ಣ ಆರೋಗ್ಯ ಟ್ರಸ್ಟ್‌ನೊಂದಿಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಆಸ್ಪತ್ರೆಗಳ ನೊಂದಾವಣೆ ಕುರಿತ ಮಾಹಿತಿಗಾಗಿ ವೆಬ್‌ಸೈಟ್ www.mss.kar.nic.inಟೋಲ್ ಫ್ರೀ ಸಂಖ್ಯೆ 1800 425 8330 ಅಥವಾ 7259037902 ಸಂಪರ್ಕಿಸಬಹುದಾಗಿದೆ. ಅರ್ಹ ಆಸ್ಪತ್ರೆಗಳು ಎಪ್ರಿಲ್ 23ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರ ಪ್ರಕಟಣೆ ತಿಳಿಸಿದೆ.







