ಮಾ.25ಕ್ಕೆ ಅಭಿನಂದನಾ ಸಮಾರಂಭ
ಬೆಂಗಳೂರು, ಮಾ.19: ಇತ್ತೀಚೆಗೆ ನಡೆದ ವಿಧಾನಸಭಾ ಹಾಗೂ ತಾಲೂಕು ಮತ್ತು ಜಿಪಂ ಚುನಾವಣೆಯಲ್ಲಿ ಗೆದ್ದಿರುವ ಕುರುಬ ಜನಾಂಗದವರಿಗೆ ಮಾ.25ರಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನಕ ಎಕ್ಸ್‌ಪ್ರೆಸ್ ಮೀಡಿಯಾ ಗ್ರೂಪ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮೀಕಾಂತ ಎನ್. ತೋಂಟಾಪುರ, ಕುರುಬ ಸಮುದಾಯದವರನ್ನು ಇನ್ನಷ್ಟು ಪ್ರೋತ್ಸಾಹಿಸಲು ಹಾಗೂ ಸಮಾಜದ ಒಳಿತಿಗೆ ಹೆಚ್ಚು ಒತ್ತು ನೀಡಲು ಮುಂದಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೆ.ಎಸ್. ಈಶ್ವರಪ್ಪ ಉದ್ಘಾಟನೆ ಮಾಡುವರು. ಎಚ್.ಎಂ. ರೇವಣ್ಣ, ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ಮಹಾದೇವ್ ಜಾನಕರ್, ಸಿದ್ದರಾಮಾನಂದ ಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
Next Story





