ದರೋಡೆಗೆ ಸಂಚು: ಆರು ಮಂದಿ ಸೆರೆ
ಉಡುಪಿ, ಮಾ.19: ದರೋಡೆಗೆ ಸಂಚು ರೂಪಿಸುತ್ತಿದ್ದ ಆರು ಮಂದಿಯನ್ನು ಉಡುಪಿ ನಗರ ಪೊಲೀಸರು ಮಾ.18ರಂದು ಸಂಜೆ ವೇಳೆ ಸಗ್ರಿ ಟಿಎಂಎ ಪೈ ಶಾಲೆಯ ಬಳಿ ಬಂಧಿಸಿದ್ದಾರೆ.
ಬಂಧಿತರನ್ನು ಶಿವರಾಜ್ ಜೆ.ಡಿ ಯಾನೆ ಶಿವ ಗೌಡ, ಈಶ್ವರ ವೈ.ಜೆ. ಯಾನೆ ಈಶ್ವರ ಗೌಡ, ಚಂದ್ರೇ ಗೌಡ ಯಾನೆ ಬಾಲು, ಚೇತನ್ ಯಾನೆ ಕುಮಾರ ಸ್ವಾಮಿ, ಪುನೀತ್ ಗೌಡ ಯಾನೆ ಪುನಿ, ವಿಜಯ ಕುಮಾರ್ ಯಾನೆ ವಿಜಯ ಎಂದು ಗುರುತಿಸಲಾಗಿದೆ.
ಇವರಿಂದ ಒಟ್ಟು 8 ಮೊಬೈಲ್, 1 ತಲವಾರ್, 1 ಕಬ್ಬಿಣದ ರಾಡ್, 1 ದೊಣ್ಣೆ ಹಾಗೂ 3 ಮೆಣಸಿನ ಪುಡಿ ಪ್ಯಾಕೆಟ್ ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





