ವೆನೆಝುವೆಲ ಅಧ್ಯಕ್ಷರಿಗೆ ಕ್ಯೂಬದ ಶ್ರೇಷ್ಠ ಗೌರವ
ಹವಾನ, ಮಾ. 19: ಕ್ಯೂಬ ಶುಕ್ರವಾರ ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಅವರಿಗೆ ತನ್ನ ದೇಶದ ಅತ್ಯುನ್ನತ ಸರಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹವಾನಕ್ಕೆ ಭೇಟಿ ನೀಡುವ ಎರಡು ದಿನಗಳ ಮುನ್ನ ಈ ಕಾರ್ಯಕ್ರಮ ನಡೆದಿದ್ದು, ಇದು ತನ್ನ ಸಾರ್ವಭೌಮತೆಯನ್ನು ಸಾರುವ ಕ್ಯೂಬದ ಕ್ರಮವಾಗಿದೆ ಎನ್ನಲಾಗಿದೆ.
ಕ್ಯೂಬದ ಅಧ್ಯಕ್ಷ ರವುಲ್ ಕ್ಯಾಸ್ಟ್ರೊ ‘ಆರ್ಡರ್ ಆಫ್ ಜೋಸ್ ಮಾರ್ಟಿ’ ಪದಕವನ್ನು ಮಡುರೊ ಅವರ ಅಂಗಿಗೆ ಚುಚ್ಚಿದರು. ಕ್ಯೂಬ ಮತ್ತು ವೆನೆಝುವೆಲಗಳು ಮಡುರೊ ಅವರ ಪೂರ್ವಾಧಿಕಾರಿ ದಿವಂಗತ ಹ್ಯೂಗೊ ಚವೇಝ್ 1999ರಲ್ಲಿ ಅಧಿಕಾರಕ್ಕೆ ಬಂದಂದಿನಿಂದಲೂ ಜೊತೆಯಾಗಿ ನಿಂತು ಅಮೆರಿಕದ ವಿರುದ್ಧ ಸಡ್ಡು ಹೊಡೆದಿವೆ.
Next Story





