Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕಪೂರ್ ಆ್ಯಂಡ್ ಸನ್ಸ್‌

ಕಪೂರ್ ಆ್ಯಂಡ್ ಸನ್ಸ್‌

ನೋಡಬಹುದಾದ ಚಿತ್ರ

ವಾರ್ತಾಭಾರತಿವಾರ್ತಾಭಾರತಿ20 March 2016 12:03 AM IST
share
ಕಪೂರ್ ಆ್ಯಂಡ್ ಸನ್ಸ್‌

ಕೌಟುಂಬಿಕ ಚಿತ್ರವೆಂದರೆ ಅದು ಕರಣ್ ಜೋಹರ್ ಅವರ ಕಭೀ ಕುಶಿ ಕಭಿ ಗಮ್ ಆಗಿರಬೇಕಾಗಿಲ್ಲ. ಅದಕ್ಕಿಂತಲೂ ಭಿನ್ನವಾಗಿ, ವಾಸ್ತವಕ್ಕೆ ತುಸು ಹತ್ತಿರವಾಗಿ ಕುಟುಂಬದೊಳಗಿನ ಜಗಳ, ಪ್ರೀತಿಯನ್ನು ಕಟ್ಟಿಕೊಡುವ ಚಿತ್ರ ಕಪೂರ್ ಆ್ಯಂಡ್ ಸನ್ಸ್. ಮೆಲೋಡ್ರಾಮಗಳಿಲ್ಲ, ಹೊಸ ತಲೆಮಾರಿಗೆ ಪೂರಕವಾಗಿ ಕುಟುಂಬ ಸಂಬಂಧಗಳನ್ನು ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ಶಕುನ್ ಬಾತ್ರಾ ಮಾಡುತ್ತಾರೆ.

ಕತೆಯ ಬೇರು ಅಜ್ಜ ಕಪೂರ್(ರಿಷಿ ಕಪೂರ್) ಅವರಿಂದ ಹೊರಡುತ್ತದೆ. ಅಂದರೆ 1921ರಲ್ಲಿ ಹುಟ್ಟಿದ ರಿಷಿ ಕಪೂರ್ ಅವರಿಂದ ಅವರ ಮೊಮ್ಮಕ್ಕಳಾದ ಅರ್ಜುನ್(ಸಿದ್ಧಾರ್ಥ್) ಹಾಗೂ ರಾಹುಲ್(ಫವಾದ್)ವರೆಗೆ ಹರಡಿಕೊಳ್ಳುತ್ತದೆ. ಹಳೆ, ಹೊಸ ತಲೆಮಾರಿನ ಮಧ್ಯೆ ಏಗಾಡುವವರು ಜಗಳಗಂಟ ಹರ್ಷ(ರಜತ್) ಹಾಗೂ ಸುನೀತಾ. ಇವರೆಲ್ಲರನ್ನೂ ಒಂದು ಫೋಟೋದಲ್ಲಿ ಸಂತೋಷದಿಂದ ನೋಡುವ ಬಯಕೆ ಅಜ್ಜ ಕಪೂರ್ ಅವರದು. ಅವರ ಆಸೆ ಈಡೇರುತ್ತದೆಯೇ ಎನ್ನುವುದು ಕ್ಲೈಮಾಕ್ಸ್. ಈ ಕುಟುಂಬದೊಳಗೆ ಅಚಾನಕ್ ಪ್ರವೇಶಿಸುವ ತಿಯಾ(ಆಲಿಯಾ) ಒಂದು ಸಣ್ಣ ಕಂಪನವನ್ನು ಸೃಷ್ಟಿಸುತ್ತಾಳೆ. ರಾಹುಲ್‌ಗೆ ಮುತ್ತು ಕೊಡುತ್ತಾಳೆ. ಅರ್ಜುನ್ ಜೊತೆ ಲಲ್ಲೆ ಹೊಡೆಯುತ್ತಾಳೆ. ತಿಯಾ ಸಂಬಂಧಗಳನ್ನು ಬೆಸೆಯುವಂತೆಯೇ ಮುರಿಯುವುದಕ್ಕೂ ಕಾರಣವಾಗುತ್ತಾಳೆ. ಇಲ್ಲಿ ಸೃಷ್ಟಿಯಾಗುವ ಗೊಂದಲಗಳನ್ನು ಲವಲವಿಕೆಯ ದಾಟಿಯಲ್ಲಿ ನಿರ್ದೇಶಕರು ನಿರೂಪಿಸುತ್ತಾರೆ. ಕುಟುಂಬ ಹೊರಗೆಲ್ಲರಿಗೂ ಸುಂದರವೇ. ಆದರೆ ಒಳಗೆ ಇಣುಕಿದಾಗ ಅಲ್ಲಿ ಒಬ್ಬೊಬ್ಬರ ಹುಳುಕುಗಳೂ ಕಾಣಿಸಿಕೊಳ್ಳುತ್ತಾ ಭೀಕರ ರೂಪವೊಂದು ಕಾಣಿಸಿಕೊಳ್ಳುತ್ತದೆ. ಕಪೂರ್ ಆ್ಯಂಡ್ ಸನ್ಸ್ ಕುಟುಂಬದ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇಲ್ಲಿ ಸಹೋದದರು ಕಳ್ಳರು; ಪೋಷಕರು ವಂಚಕರು; ಅಣ್ಣತಮ್ಮಂದಿರ ನಡುವೆಯೇ ಸಂಶಯ. ಈ ಪರಿಪೂರ್ಣ ಮಕ್ಕಳು ಪರಿಪೂರ್ಣ ಪ್ರೀತಿಯ ಬದುಕನ್ನು ಹೊಂದಿರುವುದೇ ಇಲ್ಲ. ಉಲ್ಲಾಸಮಯ ಸನ್ನಿವೇಶದಲ್ಲೂ ಕಿರುಚುವ ಕುಟುಂಬ.

ಅಜ್ಜನೂ ಅಷ್ಟೇ. ಆತನೇನೂ ಆದರ್ಶನಲ್ಲ. ಒಳಗೊಳಗೇ ಅಶ್ಲೀಲತೆಯನ್ನು ಬಚ್ಚಿಟ್ಟುಕೊಂಡಿರುವ ಅವನ ಎದೆಯಲ್ಲಿ, ಒದ್ದೆಯಾಗಿರುವ ಮಂದಾಕಿನಿ ಇನ್ನೂ ಉಸಿರಾಡುತ್ತಿದ್ದಾರೆ. ಮೊಮ್ಮಕ್ಕಳ ಐಪಾಡಿನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವ ಚಪಲ ಅವನಲ್ಲಿ ಉಳಿದಿದೆ. ಮೊಮ್ಮಕ್ಕಳಲ್ಲೂ ದಾಯಾದಿ ಸ್ಪರ್ಧೆಗಳಿವೆ. ಆ ಸ್ಪರ್ಧೆಗೆ ತಿಯಾ ಪ್ರವೇಶ ಇನ್ನಷ್ಟು ತೀವ್ರತೆಯನ್ನು ಕೊಡುತ್ತದೆ. ಫವಾದ್ ಹಾಗೂ ಸಿದ್ಧಾರ್ಥ್ ಸಂಪೂರ್ಣ ವಿಭಿನ್ನ, ಸಿದ್ಧಾರ್ಥ್ ದುರ್ಬಲ; ಆದರೆ ಇಷ್ಟವಾಗುತ್ತಾನೆ. ಫವಾದ್ ಜಾಣ್ಮೆಯ ವ್ಯಕ್ತಿ.

ಕ್ರೋಧ, ಕಿರಿಕಿರಿಯಿಂದ ಹಿಡಿದು, ತಾಳ್ಮೆಯ, ವ್ಯಸನದ ವರೆಗೂ ಆಕರ್ಷಕ ನಿರ್ವಹಣೆಯಿಂದ ರತ್ನಾ ಪಾಠಕ್ ಷಾ ಗಮನ ಸೆಳೆಯುತ್ತಾರೆ. ಇದರ ಜತೆಗೆ ಸಣ್ಣ ನವಿರು ಸ್ಪರ್ಶಗಳು, ಯಾರದೋ ಶೂ ಯಾರೋ ಧರಿಸುವುದು, ಅಲಿಯಾ ಹಾಗೂ ಸಿದ್ಧಾರ್ಥ ಸಂಯೋಗ, ಹಳೆ ಜಗತ್ತಿನ ಪುಟ್ಟ ಪಟ್ಟಣ, ಮಕ್ಕಳು, ಪೋಷಕರು ಆರಾಮದಿಂದ ಕಳೆಯುವ ಹಾಗೂ ಸಂಘರ್ಷದ ಆಧುನಿಕ ಜಗತ್ತು, ಮತ್ತಿತರ ಅಂಶಗಳಿಂದ ಕಪೂರ್ ಆ್ಯಂಡ್ ಸನ್ಸ್ ವೈಶಿಷ್ಟ್ಯ ಪಡೆದಿದೆ.

ಆಧುನಿಕ, ಶ್ರೀಮಂತ ನಗರ ಕುಟುಂಬಗಳ ಬದುಕನ್ನು ನವಿರಾಗಿ ತೆರೆದಿಡುವ ಈ ಚಿತ್ರ, ಹಲವೆಡೆ ಪೂರ್ವನಿರ್ಧರಿತವೇನೋ ಅನ್ನಿಸಿದರೂ, ಕೊಡುವ ಮನರಂಜನೆಯಲ್ಲಿ ಲೋಪವಿಲ್ಲ. ಚಿತ್ರದಲ್ಲಿ ವ್ಯಂಗ್ಯಗಳಿವೆ. ಹಸಿ ಸತ್ಯಗಳಿವೆ. ನೋವುಗಳಿವೆ. ಆಕ್ರೋಶಗಳಿವೆ. ಆದರೆ ಅವೆಲ್ಲವೂ ನೋಡುಗರನ್ನು ಕಪೂರ್ ಕುಟುಂಬದ ಜೊತೆಗೆ ಇನ್ನಷ್ಟು ಹತ್ತಿರ ಬೆಸೆಯುತ್ತದೆ. ಸಂಗೀತ ಪರವಾಗಿಲ್ಲ. ವೀಲ್‌ಚೇರ್‌ನಲ್ಲಿ ಕುಳಿತು ರಿಷಿಕಪೂರ್ ತನ್ನ ಪಾತ್ರವನ್ನು ಚಾಕಚಕ್ಯತೆಯಿಂದ ನಿಭಾಯಿಸುತ್ತಾರೆ. ಕ್ಯಾಮರಾ ಕೈಚಳಕ, ಕುಟುಂಬದ ಕೋಣೆ ಕೋಣೆಯ ರಹಸ್ಯವನ್ನು ತೆರೆದಿಡುತ್ತದೆ. ಒಮ್ಮೆ ನೋಡಬಹುದಾದ ಚಿತ್ರ ಕಪೂರ್ ಆ್ಯಂಡ್ ಸನ್ಸ್. ಯಾಕೆಂದರೆ ಕೆಲವು ಪಾತ್ರಗಳಲ್ಲಿ ನಾವು ನಮ್ಮನ್ನು ಖಂಡಿತವಾಗಿಯೂ ನೋಡಿಕೊಳ್ಳಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X