ಮಾ. 22 ರಿಂದ 24: ಅಜಿಲಮೊಗರು ಮಾಲಿದಾ ಉರೂಸ್

ವಿಟ್ಲ, ಮಾ.20: ಅಜಿಲಮೊಗರು ಹಝ್ರತ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ಅವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಇತಿಹಾಸ ಪ್ರಸಿದ್ಧ 743ನೇ ಮಾಲಿದಾ ಉರೂಸ್ ಕಾರ್ಯಕ್ರಮವು ಮಾ 22 ರಿಂದ 24 ರವರೆಗೆ ನಡೆಯಲಿದೆ.
ಮಾ 22 ರಂದು ಭಂಡಾರದ ಹರಕೆ, ಮಾ 23 ರಂದು ಐತಿಹಾಸಿಕ ಮಾಲಿದಾ ಉರೂಸ್ ಹಾಗೂ ಮಾ 24 ರಂದು ಕಂದೂರಿ ಊಟ ಕಾರ್ಯಕ್ರಮವು ನಡೆಯಲಿದೆ ಎಂದು ಅಜಿಲಮೊಗರು ಮಸೀದಿ ಪ್ರಕಟಣೆ ತಿಳಿಸಿದೆ.
Next Story





