ಕಲಾಭವನ್ ಮಣಿ ನಿಗೂಢ ಸಾವು ಪ್ರಕರಣ: ಬಂಧಿತರ ವಿರುದ್ಧ ಶರಾಬು ಮಾರಾಟ ಕೇಸು ಮಾತ್ರ, 140 ಮಂದಿಯ ವಿಚಾರಣೆ

ಚಾಲಕ್ಕುಡಿ, ಮಾರ್ಚ್.20: ನಟ ಕಲಾಭವನ್ ಮಣಿ ಮರಣದ ಕುರಿತ ಊಹಾಪೋಹಗಳು ಇನ್ನೂ ನಿಂತಿಲ್ಲ. ಕೊಲೆಪಾತಕದ ಜೊತೆಗೆ ಆತ್ಮಹತ್ಯೆ ಕೂಡಾ ಆಗಿರಬಹುದೆಂಬ ಸಾಧ್ಯತೆಗಳನ್ನೂ ಪೊಲೀಸರು ಪರಿಗಣಿಸುತ್ತಿದ್ದಾರೆ. ಮಣಿ ಶರೀರದಲ್ಲಿ ಕ್ಲೋರ್ಪೈರಿಫೋಸ್ ಕೀಟನಾಶಕ ಪತ್ತೆಯಾಗಿದೆ. ಮಣಿಯ ಮನೆಯ ಬಾಳೆತೋಟದಲ್ಲಿ ಕೀಟನಾಶಕ ಲಭಿಸಿತ್ತು. ಪತ್ತೆಯಾದಲ್ಲಿ ಬಳಸದ ತೆರೆದ ಎರಡು ಬಾಟ್ಲಿಗಳೂ ಇವೆ. ಅದನ್ನು ಬಾಳೆಗಿಡಗಳಿಗೆ ಬಳಸಲು ಖರಿದೀಸಲಾಗಿತ್ತೆಂದು ಕಾರ್ಮಿಕರು ಸಾಕ್ಷಿ ಹೇಳಿದ್ದಾರೆ. ಮನೆಯ ಹತ್ತಿರವೇ ಕಂಡು ಬಂದುದರಿಂದ ಇದನ್ನು ಮಣಿ ಸ್ವಯಂ ಬಳಸಿರಬಹುದೆಂಬ ತರ್ಕ ಬಲಪಡೆದುಕೊಂಡಿದೆ. ಅಲ್ಲದಿದ್ದರೆ ಬಾಟ್ಲಿಗಳನ್ನು ಅಲ್ಲಿಂದ ತೆಗೆದಿಡಲಾಗುತ್ತಿತ್ತು ಪೊಲೀಸರ ಅಭಿಪ್ರಾಯವಾಗಿದೆ. ತನಿಖಾಧಿಕಾರಿಗಳು ಕೀಟ ನಾಶಕದ ಬಾಟ್ಲಿಗಳನ್ನು ಪತ್ತೆ ಹಚ್ಚಿದ್ದಾರೆ. ಅದೇವೇಳೆ ಮಣಿಯ ಮರಣ ನಿಮಿತ್ತ ಎಂಟು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶರಾಬು ತಂದದ್ದು ಮತ್ತು ಕುಡಿದದ್ದಕ್ಕಾಗಿ ಪ್ರಕರಣ ಹಾಕಲಾಗಿದೆ. ಅರುಣ್, ವಿಪಿನ್, ಮುರುಗನ್, ಜೋಮೋನ್, ಜೋಯ್ ಎಂಬವರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಇವರ ವಿರುದ್ಧ ಕೊಲೆಆರೋಪ ಹೊರಿಸಬೇಕೆಂಬ ಆಗ್ರಹ ಕೇಳಿಸಿತ್ತು. ಆದರೆ ಸದ್ಯ ಕೊಲೆಕೃತ್ಯದತ್ತ ಬೆರಳು ತೋರಿಸುವ ಯಾವುದೇ ಸುಳಿವು ಸಿಕ್ಕಿಲ್ಲ. ಆದ್ದರಿಂದ ಶರಾಬು ಮಾರಾಟ ಆರೋಪವನ್ನು ಮಾತ್ರ ಇವರ ಮೇಲೆ ಹೊರಿಸಲಾಗಿದೆ. ಅದೇವೇಳೆ ಮಣಿಯ ಮರಣವನ್ನು ತನಿಖಿಸುವ ತಂಡದ ಸದಸ್ಯರನ್ನು ಕೂಡಾ ಹೆಚ್ಚಿಸಲಾಗಿದೆ. ಕ್ರೈಂಬ್ರಾಂಚ್ ಎಸ್ಪಿ ಪಿಎನ್ ಉಣ್ಣಿರಾಜನ್, ಡಿವೈಎಸ್ಪಿ ಸೋಜನ್‌ರನ್ನು ಈ ತಂಡಕ್ಕೆ ಸೇರಿಸಲಾಗಿದೆ. ಈಗಾಗಲೇ ಪೊಲೀಸರ ವಶದಲ್ಲಿರುವ ನಾಲ್ಕುಮಂದಿಯನ್ನು ರಹಸ್ಯ ಕೇಂದ್ರವೊಂದಲ್ಲಿರಿಸಲಾಗಿದೆ. ತನಿಖಾ ತಂಡ ಪ್ರಶ್ನಿಸುವುದನ್ನು ಮುಂದುವರಿಸಿದೆ. ಅರುಣ್, ವಿಪಿನ್, ಮುರುಗನ್, ಬಿನು ಎಂಬವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಚೆನ್ನತ್ತುನಾಟ್‌ನಲ್ಲಿರುವ ಮನೆಯ ಹತ್ತಿರದ ಕಲಾಭವನ್ ಮಣಿಯ ಮಾಲಕತ್ವದ ಏಳು ಸೆಂಟ್ ಬಾಳೆ ತೋದಿಂದ ಕ್ಲೋರ್‌ಪೈರಿಫೋಸ್ ಕೀಟನಾಶಕ ಪತ್ತೆಯಾಯಿತು. ಏಳು ಬಾಟ್ಲಿಗಳು ಅಲ್ಲಿದ್ದವು. ಇದರಲ್ಲಿ ಎರಡು ಬಾಟ್ಲಿಗಳು ಕ್ಲೋರ್‌ಪೈರಿಫೋಸ್‌ನದ್ದೆಂದು ದೃಢಗೊಂಡಿದೆ. ಸಾಮಾನ್ಯವಾಗಿ ಬಾಳೆ ಬೆಳೆಗೆ ಬಳಸುವ ಕೀಟನಾಶಕವಿದು. ಈ ವಿಷವೇ ಮಣಿಯ ದೇಹವನ್ನು ಸೇರಿತ್ತೇ ಎಂಬ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ಇದಕ್ಕೆ ಸಂಬಂಧಿಸಿ ಕೆಲವರನ್ನು ಪ್ರಶ್ನಿಸಲಾಗಿದೆ. ಕಲಾಭವನ್ ಮಣಿಯ ಮರಣಕ್ಕೆ ಕಾರಣವಾದ ಕೀಟನಾಶಕದ ಮೂಲ ಹುಡುಕುತ್ತಿರುವ ವಿಶೇಷ ತನಿಖಾ ತಂಡ ಅವರ ಆರ್ಥಿಕ ವ್ಯವಹಾರದ ಕುರಿತು ತನಿಖೆ ನಡೆಸಲಿಕ್ಕಿದೆ. ಮಣಿಯನ್ನು ಕೆಲವರು ಬಳಸಿಕೊಂಡಿದ್ದಾರೆ ಎಂದು ಸಹೋದರ ಆರ್‌ಎಲ್‌ವಿ ರಾಮಕೃಷ್ಣನ್ ಹೇಳಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಖರ್ಚಿಗಾಗಿ ಮ್ಯಾನೇಜರ್ ಗರಿಷ್ಠ ಪ್ರಯತ್ನ ಕೇವಲ 27,000 ರೂಪಾಯಿ ಮಾತ್ರವೇ ಲಭಿಸಿದ್ದೆಂದು ವೈದ್ಯ ಸುಮೇಶ್ ಹೇಳಿದ್ದರು. ಹಣನಷ್ಟವಾಗುತ್ತಿರುವುದಕ್ಕೆ ಮಣಿ ದುಃಖಿತರಾಗಿದ್ದರು ಎಂದು ಪತ್ನಿ ನಿಮ್ಮಿ ತಿಳಿಸಿದ್ದರು. ಇವೆಲ್ಲವನ್ನೂ ಮುಂದಿಟ್ಟು ಮಣಿ ಯಾರಿಗಾದರೂ ದೊಡ್ಡ ಮೊತ್ತದ ಸಾಲ ನೀಡಿರಬಹುದೇ ಎಂದು ತನಿಖೆ ನಡೆಯುತ್ತಿದೆ. ಶಂಕಿತರ ಫೋನ್ ಕಾಲ್ ಮಾಹಿತಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈತನ್ಮಧ್ಯೆ 140ಕ್ಕೂ ಅಧಿಕ ಮಂದಿಯನ್ನು ಪೊಲೀಸರು ತನಿಖಿಸಿದ್ದಾರೆ. ಕೆಲವು ನಿರ್ಣಾಯಕ ಮಾಹಿತಿಗಳನ್ನು ದೃಢಪಡಿಸಲಿಕ್ಕಾಗಿ ಹಲವರನ್ನು ಪುನಃ ಪ್ರಶ್ನಿಸಲಿಕ್ಕಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಅಗತ್ಯೆವೆನಿಸಿದರೆ ತರಿಗಿಡ ಸಾಬು, ಜಾಫರ್ ಇಡುಕ್ಕಿ ಇವರನ್ನೂ ಮತ್ತೆ ಪ್ರಶ್ನೆಗೆ ಗುರಿಪಡಿಸಲಾಗುವುದು ಎಂದು ತನಿಖಾ ತಂಡ ಮುಖ್ಯಸ್ಥರು ಹೇಳಿದ್ದಾರೆ. ಕಸ್ಟಡಿಯಲ್ಲಿರುವವರನ್ನು ಸುಳ್ಳುಪರೀಕ್ಷೆಗೊಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆನ್ನಲಾಗಿದೆ. ಮಣಿಯ ರಕ್ತದ ಸ್ಯಾಂಪಲ್ ಪುನಃ ಪರೀಕ್ಷೆಗೊಳಗಾಗಲಿದ್ದು ಪಾಡಿಯ ರೆಸ್ಟ್ ಹೌಸ್‌ಗೆ ಕೀಟನಾಶಕ ಹೇಗೆ ಬಂತು? ಮುರುಗನ್, ವಿಪಿನ್, ಅರುಣ್ ರೆಸ್ಟ್ ಹೌಸ್ ಶುಚಿಗೊಳಿಸಿದ್ಧೇಕೆ. ಪ್ಲಾಸ್ಟಿಕ್ ಕವರ್‌ನಲ್ಲಿ ಇವರು ಬೆಳ್ಳಂಬೆಳಗ್ಗೆ ಏನನ್ನು ಕಳುಹಿಸಿದ್ದಾರೆ. ಮಣಿ ಶರಾಬು ಕುಡಿಯುವುದಿಲ್ಲವಾದರೆ ಅದನ್ನು ತರಲು ಯಾರು ಸೂಚಿಸಿದ್ದು ಇಂತಹ ವಿಷಯಗಳ ಮೇಲೆ ಪೊಲೀಸ್ ತನಿಖೆ ಕೇಂದ್ರಿತವಾಗಿವೆ ಎಂದು ರೂರಲ್ ಎಸ್ಪಿ ಕಾರ್ತಿಕ್ ತಿಳಿಸಿದ್ದಾರೆ. ಕಲಾಭವನ್ ಮಣಿ ಗಂಭೀರ ಕರುಳು ರೋಗದಿಂದ ಮೃತರಾಗಿದ್ದಾರೆಂದು ಪ್ರಥಮವಾಗಿ ಹೊರಬಂದಿದ್ದ ಮಾಹಿತಿಯಾಗಿತ್ತು. ಆದರೆ ಕೊಚ್ಚಿಯ ರಾಸಾಯನಿಕ ಪರೀಕ್ಷಾ ಲ್ಯಾಬ್‌ನಲ್ಲಿ ಕೀಟನಾಶಕ ಮಣಿಯ ದೇಹವನ್ನು ಸೇರಿತ್ತೆಂಬುದು ಪತ್ತೆಯಾಗಿತ್ತು. ಮಣಿಯ ಶರೀರಕ್ಕೆ ವಿಷಾಂಶಗಳು ಹೇಗೆ ಸೇರಿಕೊಂಡಿವೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.







