ಅನುಪಮ್ ಖೇರ್-ಸಂಸದ ಕಿರಣ್ ಖೇರ್ ವಿರುದ್ಧ ಭೂಕಬಳಿಕೆ,ಕಿರುಕುಳ ಆರೋಪ ಮಾಡಿರುವ ಅತ್ತಿಗೆ

ಚಂಡೀಗಡ, ಮಾ.20: ಬಿಜೆಪಿ ಸಂಸದೆ ಕಿರಣ್ ಖೇರ‍್ ಅವರು ತನ್ನ ಪತಿ ಚಿತ್ರ ಬಾಲಿವುಡ್ ನಟ ಅನುಪಮ್ ಖೇರ್ ಅವರೊಂದಿಗೆ ತಮಗಿರುವ ಅಧಿಕಾರವನ್ನು ಬಳಸಿಕೊಂಡು ಭೂಕಬಳಿಕೆ ಮಾಡಿದ್ದಾರೆ ಮತ್ತು ತನಗೆ ಕಿರುಕುಳ ನೀಡಿರುವುದು ಕಿರಣ್ ಖೇರ‍್ ಅವರ ಅತ್ತಿಗೆ ಗುರಿಂದರ‍್ ಸಂಧು ಆರೋಪಿಸಿದ್ದಾರೆ.
ಸಹೋದರನ ವಶದಲ್ಲಿದ್ದ ಪೂರ್ವಜರ ಮನೆಯನ್ನುಬಿಜೆಪಿ ಸಂಸದೆ ಕಿರಣ್ ಖೇರ‍್ ಅವರು ತನ್ನ ಪತಿ ಬಾಲಿವುಡ್ ನಟ ಅನುಪಮ್ ಖೇರ್ ಜೊತೆ ಸೇರಿಕೊಂಡು ಅಕ್ರಮವಾಗಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಗುರಿಂದರ‍್ ಸಂಧು ಟಿವಿ ಚಾನೆಲೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಆರೋಪಿಸಿದ್ಧಾರೆ..
"2003ರಲ್ಲಿ ನನ್ನ ಗಂಡ ನಿಧನರಾದರು. ಕಿರಣ್ ಖೇರ್ ನನ್ನ ಗಂಡನ ತಂಗಿ. ಆಕೆ ಬಾಲಿವುಡ್ ನಟ ಪತಿ ಅನುಪಮ್ ಖೇರ್ ಜೊತೆ ಸೇರಿಕೊಂಡು ನನ್ನ ಪತಿಯ ಪೂರ್ವಜರ ಮನೆಯನ್ನು ಅಕ್ರಮವಾಗಿ ವಶಕ್ಕೆ ತೆಗದುಕೊಂಡಿದ್ದಾರೆ. ಅವರು ಈ ಮನೆಯನ್ನು ಅರ್ಧಭಾಗ ನಲೆಸಮ ಮಾಡಿದಾಗ ನನಗೆ ಮನೆಯನ್ನು ಒತ್ತುವರಿ ಮಾಡಿರುವ ವಿಚಾರ ಅರಿವಿಗೆ ಬಂತು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದ ಪರಿಣಾಮ ಯಥಾಸ್ಥಿತಿ ಆದೇಶ ದೊರೆಯಿತು ” ಎಂದು ಗುರಿಂದರ‍್ ಸಂಧು ಹೇಳಿದ್ದಾರೆ.
" ಕಳೆದ ಮಾರ್ಚ್ 18ರಂದು ನಾನು ನ್ಯಾಯಾಲಯಕ್ಕೆ ಹೇಳಿಕೆ ದಾಖಲಿಸಲು ಹೋಗಿದ್ದ ಸಂದರ್ಭದಲ್ಲಿ ನನ್ನ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪೊಲೀಸರು ತನ್ನ ಕಾರ್‌ನ್ನು ಅಲ್ಲಿಂದ ತೆರವುಗೊಳಿಸಿದರು. ಕಳೆದ ನಾಲ್ಕು ವರ್ಷಗಳಿಂದ ಅಲ್ಲಿತ್ತು. ಇದೊಂದು ಅಪರಿಚಿತ ಕಾರೆಂಬ ಆರೋಪದಲ್ಲಿ ಪೊಲೀಸರು ತೆರವುಗೊಳಿಸಿದ್ದಾರೆ. ಈ ಸಂಬಂಧಿ ಎಸ್ಎಸ್ಪಿ ಅವರನ್ನು ಸಂಪರ್ಕಿಸಿ ಠಾಣಾಧಿಕಾರಿಯನ್ನು ಭೇಟಿಯಾಗಲು ಸಲಹೆ ನೀಡಿದರು.ಅದರಂತೆ ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ಜಿಲ್ಲಾಧಿಕಾರಿ ಆದೇಶ ಪಾಲಿಸಿರುವುದಾಗಿ ಹೇಳಿದರು. ಆದರೆ ನ್ಯಾಯಾಲಯ ಯಥಾಸ್ಥಿತಿ ಆದೇಶ ಇರುವಾಗ ಜಿಲ್ಲಾಧಿಕಾರಿ ನನ್ನ ಕಾರನ್ನು ತೆರವುಗೊಳಿಸಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಗುರಿಂದರ‍್ ಸಂಧು ಆರೋಪಿಸಿದರು.
ಸಂಧು ಪತಿ, ಕಲಾವಿದ, 2003 ರಲ್ಲಿ ಹೃದಯಾಘಾತದಿಂದ ನಿಧನರಾದರು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.







