ಉತ್ತರ ಪ್ರದೇಶದ ಮವಾನದಲ್ಲಿ ಮುಸ್ಲಿಂ ರಾಜಕಾರಣಿ ಹತ್ಯೆಯ ನಂತರ ಉದ್ವಿಘ್ನ ಪರಿಸ್ಥಿತಿ ಮುಂದುವರಿಕೆ

ಮೀರತ್, ಮಾರ್ಚ್20: ಮೀರತ್‌ನಿಂದ ಮೂವತ್ತು ಕಿಮೀ ದೂರದ ವವಾನದಲ್ಲಿ ಶುಕ್ರವಾರ ತಡ ರಾತ್ರಿ ಸಮಾಜವಾದಿ ಪಕ್ಷದ ಮುಸ್ಲಿಮ್ ನಾಯಕನ ಹತ್ಯೆಯಾಗಿದ್ದು ಆ ಬಳಿಕ ಅಲ್ಲಿ ತೀರಾ ಉದ್ವಿಘ್ನ ಪರಿಸ್ಥಿತಿ ನೆಲೆಸಿದೆ ಎಂದು ವರದಿಯಾಗಿದೆ. ಇಲ್ಲಿ ಆಕ್ರೋಶಿತ ಜನರ ಗುಂಪು ಬಹಳಷ್ಟು ವಾಹನಗಳಿಗೆ ಬೆಂಕಿ ಇಟ್ಟಿದೆ. ಗ್ರಾಮೀಣ ಅಧೀಕ್ಷರ ಸರಕಾರಿ ಕಾರಿಗೆ ಬೆಂಕಿ ಹಚ್ಚಲಾಗಿದೆ. ಮೃತ ಮುಸ್ಲಿಮ್ ನಾಯಕನ ಪತ್ನಿ ಕೊಲೆಗಡುಕರನ್ನು ಬಂಧಿಸದಿದ್ದರೆ ಸ್ವಯಂ ತಾನು ಮಕ್ಕಳೊಂದಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೈಯ್ಯುತ್ತೇನೆಂದು ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಆದರೆ ಈವರೆಗೂ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ. ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯುಕ್ತಿಗೊಳಿಸಲಾಗಿದೆ. ಜನರ ಗುಂಪು ಪೊಲೀಸರ ಮೇಲೆ ಕಲ್ಲೆಸೆದಿದೆಯೆನ್ನಲಾಗಿದ್ದು ಶನಿವಾರ ಯಾವುದೇ ರೀತಿಯ ಹಿಂಸಾತ್ಮಕ ಘಟನೆ ನಡೆದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರದಂದು ಸ್ಥಳೀಯ ಜನರು ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮೃತರ ಅಂತಿಮ ಸಂಸ್ಕಾರ ಕಾರ್ಯ ನೆರವೇರಿಸಲಾಗಿದೆ. ಆಡಳಿತ ಪಕ್ಷದ ಕಾರ್ಪೊರೇಟರ್ ಜಾಹಿದ್‌ರ ಒಂದು ನಿರ್ಮಾಣಗೊಳ್ಳುತ್ತಿದ್ದ ಕಬರ್‌ಸ್ತಾನಕ್ಕೆ ಹೋಗಿದ್ದರು. ಅಲ್ಲಿ ಅಜ್ಞಾತ ವ್ಯಕ್ತಿಯೊಬ್ಬ ಅವರನ್ನು ಕೊಲೆಗೈದಿದ್ದಾನೆ. ಮವಾನಾದಲ್ಲಿ ಹತ್ಯೆಯ ಸುದ್ದಿ ಹರಡಿ ನೂರಾರು ಜನರು ರಸ್ತೆಗಿಳಿದು ರಾಜ್ಯ ಹೆದ್ದಾರಿ ತಡೆ ನಿರ್ಮಿಸಿದ್ದರು. ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕೆಂದು ಅವರು ಘೋಷಣೆ ಕೂಗುತ್ತಿದ್ದರೆಂದು ತಿಳಿದು ಬಂದಿದ್ದು, ಮೃತನ ಮನೆಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸುತ್ತಿದ್ದರೆನ್ನಲಾಗಿದೆ. ಜನರ ಗುಂಪು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಒಯ್ಯದಂತೆ ಕೆಲವು ಸಮಯ ತಡೆಹಿಡಿದಿದ್ದರು. ಪೊಲೀಸ್ ಲಾಟಿಚಾರ್ಜ್ ಮೂಲಕ ಜನರ ಗುಂಪನ್ನು ಚದುರಿಸಿ ಅಶ್ರುವಾಯು ಸೆಲ್‌ನ್ನು ಸಿಡಿಸಿದ್ದರೆಂದೂ ವರದಿಯಾಗಿದೆ.







