ಸುಳ್ಯ: ರಂಗಮನೆಯಲ್ಲಿ ಬೇಸಿಗೆ ಶಿಬಿರ
ಸುಳ್ಯ: ಸುಳ್ಯ ಹಳೆಗೇಟಿನಲ್ಲಿರುವ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಏಪ್ರಿಲ್ 10 ರಿಂದ 17 ರ ವರೆಗೆ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರಮೇಳ -2016 ನಡೆಯಲಿದೆ.
ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಾಜ್ಯದ ಸುಮಾರು 20 ಜನ ಪ್ರತಿಭಾನ್ವಿತ ಕಲಾವಿದರು ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ನೂರಾರು ವೈವಿಧ್ಯಮಯ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು 8 ರಿಂದ 15ವರ್ಷದೊಳಗಿನ ಸೀಮಿತ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಮಾರ್ಚ್ 27 ರಂದು ರಂಗಮನೆಯಲ್ಲಿ ನೀಡುವ ಪ್ರವೇಶಪತ್ರ ತುಂಬಿ ಹೆಸರು ನೊಂದಾಯಿಸಿಕೊಳ್ಳಬಹುದು.
Next Story





