Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಾ.24ರಂದು ಪುತ್ತೂರಿನಲ್ಲಿ ಮರಳಿಗಾಗಿ...

ಮಾ.24ರಂದು ಪುತ್ತೂರಿನಲ್ಲಿ ಮರಳಿಗಾಗಿ ಬೃಹತ್ ಪ್ರತಿಭಟನೆ : ಇಂದಿನಿಂದ ಮಾ.24ರ ತನಕ ಮರಳುಗಾರಿಕೆಗೆ ತಡೆ

ಮರಳು ವ್ಯಾಪಾರಸ್ಥ, ಲಾರಿ ಮಾಲಕ ಚಾಲಕರ ಸಂಘದ ಸಭೆಯಲ್ಲಿ ನಿರ್ಣಯ

ವಾರ್ತಾಭಾರತಿವಾರ್ತಾಭಾರತಿ20 March 2016 4:50 PM IST
share
ಮಾ.24ರಂದು ಪುತ್ತೂರಿನಲ್ಲಿ ಮರಳಿಗಾಗಿ ಬೃಹತ್ ಪ್ರತಿಭಟನೆ : ಇಂದಿನಿಂದ ಮಾ.24ರ ತನಕ ಮರಳುಗಾರಿಕೆಗೆ ತಡೆ

ಪುತ್ತೂರು: ಮರಳುಗಾರಿಕೆ ಕುರಿತು ಸರಕಾರದ ಅಸಮರ್ಪಕ ನೀತಿಯ ಕುರಿತು ಮಾ.24ರಂದು ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾ.21 ರಿಂದ ಮಾ.24ರ ತನಕ ಎಲ್ಲಾ ಲಾರಿ, ಪಿಕಾಪ್ ವಾಹಗಳ ಮಾಲಕರು ಮರಳು ಸಾಗಾಟವನ್ನು ನಿಲ್ಲಿಸಬೇಕು. ಜೊತೆಗೆ

ಕಲ್ಲು, ಜೆಲ್ಲಿ ಸಾಗಾಟದ ವಾಹನಗಳಿಗೂ ಲಾರಿ ಮಾಲಕರಲ್ಲೂ ತಮ್ಮ ಕೆಲಸ ಕಾರ್ಯವನ್ನು ನಿಲ್ಲಿಸುವಂತೆ ಮನವಿ ಮಾಡಬೇಕು ಎಂದು ಭಾನುವಾರ ನಡೆದ ಪುತ್ತೂರು ತಾಲೂಕು ಮರಳು ವ್ಯಾಪಾರಸ್ಥ ಲಾರಿ ಮಾಲಕ, ಚಾಲಕರ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಮರಳು ಸಾಗಾಟ ಕಂಡು ಬಂದರೆ ಅದನ್ನು ತಡೆಯುವ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಾಯಿತು.

   ಪುತ್ತೂರಿನ ಮಂಜಲ್ಪಡ್ಪು ಬೈಪಾಸ್ ರಸ್ತೆಯಲ್ಲಿನ ’ನಮನ ಟವರ್ಸ್‌’ ನಲ್ಲಿ ಭಾನುವಾರ ಮರಳು ಲಾರಿ ಚಾಲಕ ಮತ್ತು ಮಾಲಕರ ಸಂಘದ ಸಭೆಯು ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಮರಳುಗಾರಿಕೆ ಹೋರಾಟ ಸಮಿತಿಯ ಗೌರವ ಸಲಹೆಗಾರ ದಿನೇಶ್ ಮೆದು ಅವರು ಸರಕಾರದ ದ್ವಂದ್ವ ನೀತಿಯಿಂದಾಗಿ ಮರುಳುಗಾರಿಕೆಗೆ ಸಮಸ್ಯೆ ಉದ್ಭವಿಸಿದೆ. ಹಿಂದೆ ಸಿ.ಆರ್.ಝಡ್ ಮೂಲಕ ಮರಳುಗಾರಿಕೆ ನಡೆಯತ್ತಿತ್ತು. ಆದರೆ ಜಿಲ್ಲಾಡಳಿತ ಲೈಸನ್ಸ್‌ನ್ನು ನವೀಕರಿಸಿಲ್ಲ. ಮುಂದಿನ ಹಂತದಲ್ಲಿ ಅದು ಹಸಿರು ಪೀಠದಿಂದ ಅನುಮತಿ ಬೇಕಾಗಿದೆ. ಮತ್ತೊಂದು ಕಡೆ ನಾನ್ ಸಿ.ಆರ್.ರಡ್‌ನಲ್ಲಿ ಹಿಂದೆ ಗಣಿ ಇಲಾಖೆ ಮೂಲಕ ಮರಳಿಗೆ ಅನುಮತಿ ಇತ್ತು. ಪ್ರಸ್ತುತ ಅದು ಪಿಡಬ್ಲ್ಯೂಡಿಗೆ ಹಸ್ತಾಂತವಾಗಿದೆ. ಆದರೆ ಸ್ಥಳ ಏಲಂ ಮಾಡುವ ಪ್ರಕ್ರಿಯೆ ನಡೆಸಿದ್ದಾರೆ ಹೊರತು ಮರಳನ್ನು ಡಂಪ್ ಮಾಡುವ ಸ್ಥಳ ಗುರುತಾಗಿಲ್ಲ. ಈ ಹಿಂದೆ ದಿ. ವಿ.ಎಸ್ ಆಚಾರ್ಯ ಅವರು

ಮರಳುಗಾರಿಕೆಗೆ ಹೊಸ ನೀತಿ ತರುವಲ್ಲಿ ಸಿದ್ಧತೆ ನಡೆಸಿದ್ದರು. ಅದೇ ನೀತಿಯನ್ನು ತರುವುದಾದರೆ ಮರಳುಗಾರಿಕೆ ಸಮಸ್ಯೆ ಬಗೆ ಹರಿಯಬಹುದು. ಒಟ್ಟಿನಲ್ಲಿ ನಮಗೆ ಬಡವರ ಮನೆ ಕಟ್ಟಲು ಮರಳಿಲ್ಲ ಎಂದಾಗಿದೆ. ಈ ನಿಟ್ಟಿನಲ್ಲಿ ಮಾ.25ಕ್ಕೆ ಬೆಂಗಳೂರಿನಲ್ಲಿ ಮರಳಿಗೆ ಸಂಬಂಧಿಸಿ ಅಧಿಕಾರಿ ವರ್ಗದ ಸಭೆ ನಡೆಯಲಿದೆ. ಅದಕ್ಕಿಂತ ಮುಂಚಿತವಾಗಿ ಪುತ್ತೂರಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸವಾಗಬೇಕು ಎಂದರು.

 ಮರಳು ವ್ಯಾಪಾರಸ್ಥ, ಲಾರಿ ಮಾಲಕರ ಸಂಘದ ಪ್ರತಿಭಟನಾ ಉದ್ದೇಶಕ್ಕೆ ರಚನೆಗೊಂಡ ಸಮಿತಿ ಅಧ್ಯಕ್ಷ ಗಿರೀಶ್ ಪಡ್ಡಾಯೂರು ಮಾತನಾಡಿ ಮರಳುಗಾರಿಕೆ ಕುರಿತು ಅಧಿಕಾರಿಗಳಿಗೆ ಮನವಿ ಕೊಟ್ಟು ಯಾವುದೇ ಪ್ರಯೋನವಿಲ್ಲ.ಅದಕ್ಕಿಂತ ಮುಂಚಿತವಗಿ ಕಾಲು ಗಂಟೆಯಾದರೂ ರಸ್ತೆ ತಡೆ ಹಮ್ಮಿಕೊಳ್ಳಬೇಕು. ಎಲ್ಲಾ ಲಾರಿಗಳ ಮಾಲಕರು ತಮ್ಮ ತಮ್ಮ ಲಾರಿಗಳೊಂದಿಗೆ ಬೈಪಾಸ್ ರಸ್ತೆಯಿಂದ ಮುಖ್ಯರಸ್ತೆಯಾಗಿ ಮಿನಿವಿಧಾನ ಸೌಧದ ತನಕ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಬೇಕು. ಈ ಪ್ರತಿಭಟನೆಗೆ ಪಕ್ಷ ಬೇಧವಿಲ್ಲದೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಜನಸಾಮಾನ್ಯರು, ಪಂಚಾಯತ್ ಅಧಿಕಾರಿಗಳು, ಸಿವಿಲ್ ಇಂಜಿನಿಯರ್ಸ್‌ಗಳು, ಕಂಟ್ರಾಕ್ಟರ್ಸ್‌ಗಳು, ಕೂಲಿಕಾರ್ಮಿಕರು ಭಾಗವಹಿಸವಂತೆ ಮನವಿ ಮಾಡಬೇಕು. ಪ್ರತಿಭಟನೆಯ ಬಳಿಕ ನಮ್ಮ ಮನವಿಗೆ ಅಧಿಕಾರಿಗಳ ಸ್ಪಂಧನೆ ಇಲ್ಲವಾದರೆ ಹೋರಾಟ ತೀವ್ರಗೊಳಿಸಬೇಕು ಎಂದು ಸಲಹೆ ನೀಡಿದರು.

ಸರಕಾರದಿಂದ ಬಡವರಿಗೆ ಆಶ್ರಯ, ಬಸವವಸತಿ ಮನೆಕಟ್ಟಲು ರೂ. 2ಲಕ್ಷ ಅನುದಾನ ನೀಡುತ್ತಾರೆ. ಆದರೆ ಸರಕಾರದ ಅಸಮರ್ಪಕ ನೀತಿಯಿಂದಾಗಿ ಅನುದಾನ ಪಡೆದ ಬಡವರು

 ರೂ.6ಸಾವಿರಕ್ಕೆ ಸಿಗುವ ಹೊಯಿಗೆಯನ್ನು ರೂ.12ಸಾವಿರಕ್ಕೆ ಖರೀದಿಸುವಂತಾಗಿದೆ. ಒಂದು ಕಡೆ ಸರಕಾರ ಬಡವರಿಗೆ ಅನುದಾನ ನೀಡಿದರೂ ಹೊಯಿಗೆ ಸಮಸ್ಯೆಯಿಂದಾಗಿ ಅದು ಪ್ರಯೋಜಕ್ಕೆ ಬಾರದ ಹಾಗಾಗಿದೆ. ಬಡವರು ಮನೆ ಕಟ್ಟದ ಪರಿಸ್ಥಿತಿಯಲ್ಲಿದ್ದಾರೆ. ಮತ್ತೊಂದು ಕಡೆ ಸರಕಾರದ ಕಾಮಗಾರಿಗಳು ಪೂರ್ಣಕ್ಕೆ ನಿಗದಿತ ಗಡು ಇದ್ದರೂ, ಹೊಯಿಗೆ ಅಭಾವದಿಂದ ಆ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣವಾಗದೆ ಅನುದಾನ ಬಳಕೆಯಾಗದ ಸ್ಥತಿ ನಿರ್ಮಾಣಗೊಂಡಿದೆ ಎಂದು ಗಿರೀಶ್ ಪಡ್ಡಾಯೂರು ಹೇಳಿದರು.

ಸಭೆಯಲ್ಲಿ ಹೋರಾಟ ಸಮಿತಿ ರಚನೆ ಮಾಡಲಾಯಿತು.

 ಮಾ.24ರಂದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಸಹಾಯಕ ಕಮೀಷನರ್ ಮೂಲಕ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರತಿಭಟನೆ ನಡೆಯುವ ತನಕ ಲಾರಿಗಳು ಮರಳು, ಕಲ್ಲು, ಜೆಲ್ಲಿ ಸಾಗಾಟ ಮಾಡಬಾರದು ಎಂದು ವಿನಂತಿಸಲು ನಿರ್ಣಯಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X