ಉಪ್ಪಳ : ಇರಿತ ಪ್ರಕರಣ- ಆರೋಪಿಗಳಿಗಾಗಿ ವ್ಯಾಪಕ ಶೋಧ
ಮಂಜೇಶ್ವರ: ಯುವಕನನ್ನು ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಗಳಿಗಾಗಿ ಪೋಲೀಸರು ವ್ಯಾಪ ಶೋಧಕ್ಕೆ ಚಾಲನೆ ನೀಡಿದ್ದಾರೆ.
ಶುಕ್ರವಾರ ರಾತ್ರಿ ಉಪ್ಪಳ ಕೈಕಂಬದಲ್ಲಿ ತಂಡವೊಂದು ಕೋಡಿಬೈಲು ನಿವಾಸಿ ಮೊಹಮ್ಮದ್ ಅಶ್ಪಾಕ್ (34)ಎಂಬವರಿಗೆ ಇರಿದು ಗಂಭೀರ ಗಾಯಗೊಳಿಸಿತ್ತು.ಈ ಸಂಬಂಧ ಅಶ್ಪಾಕ್ ರ ದೂರಿನಂತೆ ಸಿಯಾ ಬಾಯಿಕಟ್ಟೆ,ಹಿದಾಯತ್ ನಗರದ ಕಸಾಯಿ ಶೆರೀಫ್ ನ ಸಹೋದರ ಆಪು ಹಾಗೂ ಕಂಡರೆ ಗುರುತಿಸಬಹುದಾದ ಇನ್ನೋರ್ವನ ವಿರುದ್ದ ಪೋಲೀಸರು ದೂರು ದಾಖಲಿಸಿದ್ದಾರೆ.ಕುಂಬಳೆ ಸಿಐ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ.ಶನಿವಾರ ಸಂಜೆ ಸಿಐ ನೇತೃತ್ವದ ಪೋಲೀಸರ ತಂಡ ಸ್ಥಳದಲ್ಲಿ ತನಿಖೆ ನಡೆಸಿ ವರದಿ ಕಲೆಹಾಕಿದೆ.ಜೊತೆಗೆ ಆರೋಪಿಗಳ ಪತ್ತೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆಯೆಂದು ಸಿಐ ತಿಳಿಸಿದ್ದಾರೆ.
Next Story





