ಮಂಗಳೂರು : ಗ್ಯಾಂಬ್ಲಿಂಗ್ - 10 ಜನರ ಬಂಧನ

ಮಂಗಳೂರು,ಮಾ.20: ನಗರದ ಜ್ಯೋತಿವೃತ್ತದ ಬಳಿಯಿರುವ ರಿತೇಶ್ ರಿಕ್ರಿಯೇಶನ್ ಕ್ಲಬ್‌ನಲ್ಲಿ ಅನಧಿಕೃತವಾಗಿ ಗ್ಯಾಂಬ್ಲಿಂಗ್ ನಡೆಯುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಲ್ಲಿಗೆ ದಾಳಿ ನಡೆಸಿ 10 ಜನ ಆರೋಪಿಗಳನ್ನು ಬಂಧಿಸಿ ರೂ.14610ನ್ನು ವಶಪಡಿಸಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್ .ಎಂ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಸಿಟಿಸ್ಪೆಷಲ್ ಬ್ರಾಂಚ್ ಅಧಿಕಾರಿ ಶಿವಪ್ರಕಾಶ್ ಅವರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಅಲ್ಲಿ ಅನಧಿಕೃತವಾಗಿ ಗ್ಯಾಂಬ್ಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ನಗರದ ಕೆಲವೆಡೆ ಹೈಕೋರ್ಟ್ ಅನುಮತಿಯನ್ನು ಪಡೆದುಕೊಂಡು ನಡೆಯುತ್ತಿದ್ದ ರಿಕ್ರೀಯೇಶನ್ ಕ್ಲಬ್‌ನ್ನು ಮುಚ್ಚಿರುವ ಬಗ್ಗೆ ನ್ಯಾಯಾಂಗ ನಿಂದನೆ ನೊಟೀಸ್ ಬಂದಿದ್ದು ಈ ಬಗ್ಗೆ ಈ ಬಗ್ಗೆ ಕಾನೂನು ತಜ್ಞರ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ್ ಎಂ.ಪಾಟೀಲ್ ಉಪಸ್ಥಿತರಿದ್ದರು.





