ಯೆಮನ್: 35 ಹೌದಿ ಉಗ್ರರ ಹತ್ಯೆ
ಸನಾ, ಮಾ.20: ಯೆಮನ್‌ನ ಮೂರನೆ ಅತಿ ದೊಡ್ಡ ನಗರವಾದ ತೈಝ್‌ನಲ್ಲಿ ಸರಕಾರಿ ಪರ ಪಡೆಗಳೊಂದಿಗೆ ನಡೆಸಿದ ಘರ್ಷಣೆಯಲ್ಲಿ 35 ಮಂದಿ ಶಿಯಾ ಬಂಡುಕೋರರು ಮೃತಪಟ್ಟಿದ್ದಾರೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ‘ಹೌದಿ’ ಶಿಯಾ ಬಂಡುಕೋರರು ಶುಕ್ರವಾರ ತೈಝ್ ನಗರದ ಪಶ್ಚಿಮ ಭಾಗವನ್ನು ಮರುವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸೌದಿ ನೇತೃತ್ವದ ಮೈತ್ರಿ ಪಡೆಗಳು 12ಕ್ಕೂ ಅಧಿಕ ವಾಯುದಾಳಿಗಳನ್ನು ನಡೆಸಿ, ಉಗ್ರರ ಮುನ್ನುಗ್ಗುವಿಕೆಯನ್ನು ತಡೆಗಟ್ಟಿವೆ.
ಕಳೆದ ಒಂದು ವರ್ಷದಿಂದ ತಾಯಿಝ್ ನಗರ ಹೌದಿ ಬಂಡುಕೋರರ ವಶದಲ್ಲಿತ್ತು. ಆದರೆ ಕಳೆದ ವಾರ ಸರಕಾರಿ ಪಡೆಗಳು ಬಂಡುಕೋರರನ್ನು ನಗರದ ಪಶ್ಚಿಮ ಭಾಗದಿಂದ ಹೊರದಬ್ಬುವಲ್ಲಿ ಸಫಲವಾಗಿದ್ದವು.
Next Story





