ಬಾವಿಯೊಳಗೆ ಪತ್ತೆಯಾದ ಜೀವಂತ ಮಾರ್ಟರ್‌ಗಳು ಸಿಬ್ಬಂದಿಯಿಂದ ನಿಷ್ಕ್ರಿಯ

ಬೆಳಗಾವಿ, ಮಾ.20: ಇಲ್ಲಿನ ಸಂಕೇಶ್ವರದ ಹೊರವಲಯದ ಬಾವಿಯೊಂದರಲ್ಲಿ ಮಾ.8 ರಂದು ಸೇನೆಯಲ್ಲಿ ಬಳಸುವ ಮಾದರಿಯ 60ಕ್ಕೂ ಹೆಚ್ಚು ಮಾರ್ಟರ್‌ಗಳ ಪತ್ತೆಯಾಗಿದ್ದು, ಇದೀಗ ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಜೀವಂತ ಮಾರ್ಟರ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದಲ್ಲಿ ತೋಟವೊಂದರಲ್ಲಿ ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಅವರ ತೋಟದ ಬಾವಿಯ ಹೂಳು ತೆಗೆಯುವ ವೇಳೆಯಲ್ಲಿ 60 ಮಾರ್ಟರ್‌ಗಳು ಪತ್ತೆಯಾಗಿದ್ದವು. ಆ ಪೈಕಿ 32 ಮಾರ್ಟರ್ ನಿರ್ಜೀವವಾಗಿದ್ದು, ಉಳಿದ 28 ಜೀವಂತ ಮಾರ್ಟರ್‌ಗಳನ್ನು ಸಮೀಪದ ಬೊರಗಲ್ಲ ಗ್ರಾಮದ ಗುಡ್ಡ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಅಗತ್ಯ ಮುನ್ನಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಿಷ್ಕ್ರಿಯಗೊಳಿಸಿದರು ಎಂದು ತಿಳಿಸಲಾಗಿದೆ.
Next Story





