ದಿಲ್ಲಿ ಪೊಲೀಸ್‌ನಿಂದ ಗಲಭೆ ನಿಯಂತ್ರಣಕ್ಕಾಗಿ ಪೆಪ್ಪರ್ ಬಾಲ್ ಲಾಂಚರ್‌ಗಳ ಖರೀದಿ
ಹೊಸದಿಲ್ಲಿ,ಮಾ.20: ತನ್ನ ಗಲಭೆ,ದಂಗೆ ನಿಯಂತ್ರಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿ ದಿಲ್ಲಿ ಪೊಲೀಸ್ ಇಲಾಖೆಯು ಪೆಪ್ಪರ್ ಬಾಲ್ ಲಾಂಚರ್‌ಗಳ ಖರೀದಿಗೆ ಸಜ್ಜಾಗಿದೆ. ಮಾರಣಾಂತಕವಲ್ಲದ ಈ ಅಸ್ತ್ರವನ್ನು ಅಮೆರಿಕ,ಚೀನಾ ಮತ್ತು ಹಲವಾರು ಐರೋಪ್ಯ ರಾಷ್ಟ್ರಗಳಲ್ಲಿ ಪೊಲೀಸರು ಬಳಸುತ್ತಿದ್ದಾರೆ. ಪೆಪ್ಪರ್ ಬಾಲ್ ಲಾಂಚರ್‌ಗಳಿಂದ ಹಾರಿಸಲಾಗುವ ಗುಂಡುಗಳಲ್ಲಿ ರಾಸಾಯನಿಕ ಪುಡಿಯಿರುತ್ತದೆ. ಇದು ಮೆಣಸಿನ ಹುಡಿಯಿಂದಾಗುವಂತೆ ಕಣ್ಣು ಮತ್ತು ಮೂಗುಗಳಲ್ಲಿ ಉರಿಯನ್ನುಂಟು ಮಾಡುತ್ತದೆ.
ಈ ವಾರ ದಿಲ್ಲಿ ಪೊಲೀಸ್ ಇಲಾಖೆ ಪೆಪ್ಪರ್ ಬಾಲ್ ಲಾಂಚರ್‌ಗಳ ಖರೀದಿಗಾಗಿ ತನ್ನ ಮೊದಲ ಟೆಂಡರ್‌ನ್ನು ಕರೆದಿದೆ. ಒಂದೂವರೆ ವರ್ಷದ ಹಿಂದೆ ಆಗಿನ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ಈ ಪ್ರಸ್ತಾವನೆಯನ್ನು ಮುಂದಿರಿಸಿದ್ದರು.
Next Story





