ಇನ್‌ಸ್ಟಾಗ್ರಾಂನಲ್ಲಿ ಪೋಪ್
ವೆಟಿಕನ್ ನಗರ, ಮಾ.20: ಪೋಪ್ ಫ್ರಾನ್ಸಿಸ್ ಅವರು ಪ್ರಸಿದ್ಧ ‘ಫೋಟೋ ಶೇರಿಂಗ್’ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತನ್ನ ಖಾತೆಯನ್ನು ತೆರೆಯುವ ಮೂಲಕ ಎಲ್ಲರಲ್ಲೂ ಅಚ್ಚರಿಮೂಡಿಸಿದ್ದಾರೆ. ಅವರ ಇನ್‌ಸ್ಟಾಗ್ರಾಂ ಖಾತೆಗೆ ಕೇವಲ 12 ತಾಸುಗಳಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಫಾಲೊವರ್ಸ್‌ಗಳು ಲಭಿಸಿದ್ದಾರೆ. ಪೋಪ್ ಅವರು ಇನ್‌ಸ್ಟಾ ಗ್ರಾಂನಲ್ಲಿ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುವ ಭಂಗಿಯಲ್ಲಿರುವ ತನ್ನ ಮೊದಲ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ದೇವರ ಕರುಣೆ ಹಾಗೂ ವಾತ್ಸಲ್ಯದ ದಾರಿಯಲ್ಲಿ ನಾನು ನಿಮ್ಮಾಂದಿಗೆ ಸಾಗಲಿಚ್ಛಿಸುತ್ತೇನೆ’’ ಎಂದು ಅವರು ‘ಫ್ರಾನ್ಸಿಸ್ಕಸ್’ ಎಂಬ ಹೆಸರಿನೊಂದಿಗೆ ಇನ್‌ಸ್ಟಾ ಗ್ರಾಮ್‌ನಲ್ಲಿ ಪ್ರಸಾರ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರನ್ನು ಕಳೆದ ಶುಕ್ರವಾರ ಇನ್‌ಸ್ಟಾಗ್ರಾಂನ ವರಿಷ್ಠ ಹಾಗೂ ಸ್ಥಾಪಕ ಕೆವಿನ್ ಸಿಸ್ಟ್ರೊಮ್ , ವೆಟಿಕನ್‌ನಲ್ಲಿ ಭೇಟಿಯಾಗಿದ್ದರು. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, 2012ರಲ್ಲಿ ಇನ್‌ಸ್ಟಾಗ್ರಾಂನ್ನು ಖರೀದಿಸಿದ್ದು,ಫೆಬ್ರವರಿವರೆಗೆ ಅದು 40 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ.





