ದ.ಕ.: ಮರಳುದಂಧೆಗೆ ಬಿದ್ದಿಲ್ಲ ಕಡಿವಾಣ
ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ: ಸಾರ್ವಜನಿಕರ ಆರೋಪ
ಮಂಗಳೂರು, ಮಾ.20: ಅಕ್ರಮ ಮರಳು ಗಾರಿಕೆಗೆ ಜಿಲ್ಲಾಡಳಿತ ಕಡಿ ವಾಣ ಹಾಕಿದ್ದರೂ ಜಿಲ್ಲೆಯ ಕೆಲವು ಭಾಗ ಗಳಲ್ಲಿ ಈ ದಂಧೆ ನಿರಾತಂಕವಾಗಿ ತಡೆ ಯುತ್ತಿದೆ. ಜಿಲ್ಲೆಯ ಅರ್ಕುಳ, ಅಡ್ಯಾ್ ಮತ್ತು ಹರೇಕಳ ಬೈತಾರ್ ವ್ಯಾಪ್ತಿಯ ಪ್ರದೇಶಗಳ ನೇತ್ರಾವತಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ.
ಹರೇಕಳದ ಬೈತಾರ್‌ನ ನೇತ್ರಾವತಿ ಹೊಳೆಯಲ್ಲಿ ಸಂಜೆಯಾಗುತ್ತಿದ್ದಂತೆ ಸುಮಾರು 100ಕ್ಕೂ ಅಧಿಕ ದೋಣಿ ಗಳು ನದಿಗೆ ಇಳಿಯಲು ಆರಂಭಿಸು ತ್ತಿವೆ. ಈ ದೋಣಿಗಳು ರಾತ್ರಿಯಿಂದ ಬೆಳಗ್ಗಿನ ಜಾವದವರೆಗೆ ನದಿಯಲ್ಲಿ ಮರಳುಗಾರಿಕೆ ನಡೆಸಿ, ಇಲ್ಲಿಂದ ಸಂಗ್ರ ಹಿಸಲಾದ ಮರಳನ್ನು ಟಿಪ್ಪರ್ ಮೂಲಕ ಬಾವಲಿಗುರಿ, ನಡುಪದವು, ಮುಡಿು ಮತ್ತು ಕೆದಂಬಾಡಿಗಳಿಗೆ ಕೊಂಡೊಯ್ದು ರಾಶಿ ಹಾಕಲಾಗುತ್ತವೆ.
ಮಾರನೆಯ ದಿನ ರಾತ್ರಿ ಹೊತ್ತಿನಲ್ಲಿ ಈ ಪ್ರದೇಶಗಳಲ್ಲಿ ಬೃಹತ್ ಗಾತ್ರದ ಟ್ರಕ್‌ಗಳು ಮರಳು ತುಂಬಿಸಲು ಸಿದ್ಧವಾಗಿ ನಿಂತಿರುತ್ತವೆ. ಈ ಟ್ರಕ್‌ಗಳ ಮೂಲಕ ಮರಳು ತುಂಬಿಸಿ ನಿರಾತಂಕವಾಗಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಹಲವು ತಿಂಗಳುಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ದಾಳಿ ನಡೆಸಿ ಅಕ್ರಮ ಮರಳನ್ನು ವಶಕ್ಕೆ ಪಡೆಯುತ್ತಿಲ್ಲ. ಮಾ.18ರಂದು ಸ್ಥಳೀಯರೊಬ್ಬರು ನೀಡಿದ್ದ ಮಾಹಿತಿಯ ಆಧಾರದ ಮೇಲೆ ಗಣಿ ಇಲಾಖೆಯ ಅಧಿಕಾರಿಯೊಬ್ಬರು ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರೂ ಸಂಬಂಧಪ ಟ್ಟವರ ಮೇಲೆ ಕ್ರಮಕೈಗೊಳ್ಳದೆ ವಾಪಸಾಗಿದ್ದಾರೆ. ಅಧಿಕಾರಿಗಳ ಬೆಂಬಲದಿಂದಲೇ ಇಂತಹ ಮರಳು ಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವುದು ಸ್ಥಳೀಯರ ಆರೋಪ.
ಅರ್ಕುಳ ಮತ್ತು ಅಡ್ಯಾರ್‌ಗಳಲ್ಲೂ ಅಕ್ರಮ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಆದರೆ ಈ ಎರಡೂ ಪ್ರದೇಶಗಳಿಂದ ಹೆಚ್ಚಾಗಿ ಬೆಂಗಳೂರಿನ ಕಡೆಗೆ ಮರಳು ಸಾಗಾಟವಾಗುತ್ತದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಗುತ್ತಿಗೆದಾರರು ಮರಳು ಖರೀದಿಗೆ ಬಂದರೆ ದಂಧೆಕೋರರು ಕೊಡುವುದಿಲ್ಲ. ಬೆಂಗಳೂರು ಮತ್ತು ಕೇರಳಕ್ಕೆ ಮಾರಾಟ ಮಾಡಿದರೆ ಹೆಚ್ಚಿನ ದರ ಸಿಗುತ್ತದೆ ಎಂಬುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಒಂದು ಟಿಪ್ಪರ್ ಲೋಡ್‌ಗೆ 10ರಿಂದ 12 ಸಾವಿರ ರೂ.ವರೆಗೆ ದರ ನೀಡುತ್ತೇವೆ ಎಂದರೂ ಸ್ಥಳೀಯರಿಗೆ ಮರಳು ಪೂರೈಸುವುದಿಲ್ಲ ಎಂಬುದು ಸ್ಥಳೀಯರ ಆರೋಪ.