ಲಾತೂರ್: ಜಲಮೂಲಗಳ ಸುತ್ತ ನಿಷೇಧಾಜ್ಞೆ
ಮುಂಬೈ, ಮಾ.20: ನೀರಿನ ಕುರಿತಾಗಿ ಯಾವುದೇ ಹಿಂಸಾಚಾರವನ್ನು ನಿವಾರಿಸು ವುದಕ್ಕಾಗಿ 20 ಜಲಸಂಗ್ರಹ ಟ್ಯಾಂಕ್‌ಗಳ ಸುತ್ತ ಮೇ 31ರ ವರೆಗೆ ಐವರಿಗಿಂತ ಹೆಚ್ಚು ಮಂದಿ ಸೇರದಂತೆ ಅಧಿಕಾರಿಗಳು ಬರಗಾಲ ಪೀಡಿತ ಲಾತೂರ್‌ನಲ್ಲಿ ನಿಷೇಧಾಜ್ಞೆ ವಿಧಿಸಿದ್ದಾರೆ.
ಲಾತೂರ್‌ನ ನಗರಾಡಳಿತ ನಿರ್ವಹಿಸುತ್ತಿರುವ ಟ್ಯಾಂಕ್‌ಗಳ ಸುತ್ತ ನೀರಿಗೆ ಸಂಬಂಧಿಸಿ, ಸಂಭಾವ್ಯ ಹಿಂಸಾಚಾರವನ್ನು ನಿಭಾಯಿಸುವ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಕಲೆಕ್ಟರ್ ದಂಡ ಪ್ರಕ್ರಿಯಾ ಸಂಹಿತೆಯ 144ನೆ ಸೆಕ್ಷನ್‌ನನ್ವಯ ಈ ಆದೇಶ ನೀಡಿದ್ದಾರೆ.
ಜಿಲ್ಲೆಯ ಎಲ್ಲ ಟ್ಯಾಂಕರ್‌ಗಳನ್ನು ತುಂಬುವ ಸ್ಥಳಗಳು, ಸಾರ್ವಜನಿಕ ಬಾವಿಗಳು, ಟ್ಯಾಂಕರ್‌ಗಳು ಸಾಗುವ ಮಾರ್ಗಗಳು ಹಾಗೂ ಸಂಗ್ರಹ ಟ್ಯಾಂಕ್‌ಗಳು ಅಧಿಸೂಚಿತ ಸ್ಥಳಗಳಲ್ಲಿ ಸೇರಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





