Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ನಾನು ಸಾಧ್ವಿ ಪ್ರಾಚಿಯನ್ನು...

ನಾನು ಸಾಧ್ವಿ ಪ್ರಾಚಿಯನ್ನು ಪ್ರೀತಿಸುತ್ತೇನೆ

ವಾರ್ತಾಭಾರತಿವಾರ್ತಾಭಾರತಿ20 March 2016 11:58 PM IST
share
ನಾನು ಸಾಧ್ವಿ ಪ್ರಾಚಿಯನ್ನು ಪ್ರೀತಿಸುತ್ತೇನೆ

ನಾನು ಸಾಧ್ವಿ ಪ್ರಾಚಿಯನ್ನು ಪ್ರೀತಿಸುತ್ತೇನೆ
- ಆಝಂಖಾನ್, ಉ.ಪ್ರ. ಸಚಿವ
     ಕೊಳೆತು ಹೋದ ಕುಂಬಳಕಾಯಿಗೆ, ಕೆಟ್ಟು ಹೋದ ತೆಂಗಿನಕಾಯಿ.

---------------------

ಬಾಂಬ್ ಎಸೆಯುವ ಕೈಗಳು ಬಾಲ್ ಎಸೆಯಲು ಆಗುವುದಿಲ್ಲ
- ಉದ್ಧವ ಠಾಕ್ರೆ, ಶಿವಸೇನೆ ಮುಖ್ಯಸ್ಥ

 ಬಾಲ್ ಒಳಗೆ ಬಾಂಬ್‌ನ್ನು ಇಟ್ಟರೆ ಎಸೆಯಬಹುದೇ?
---------------------

ಭಾರತದಲ್ಲಿ ದೊರೆಯುವಷ್ಟು ಪ್ರೀತಿಯನ್ನು ನಾವು ನಮ್ಮ ದೇಶದಲ್ಲಿಯೂ ಪಡೆದುಕೊಂಡಿಲ್ಲ
- ಶಾಹಿದ್ ಅಫ್ರಿದಿ, ಪಾಕ್ ಕ್ರಿಕೆಟ್ ತಂಡದ ನಾಯಕ

 ಪ್ರತಿಬಾರಿ ಸೋತು ತವರಿಗೆ ಮರಳುವ ನಿಮ್ಮನ್ನು ಆ ದೇಶದ ಜನ ಪ್ರೀತಿಸುವುದಾದರೂ ಹೇಗೆ?
---------------------

ಭಾರತಕ್ಕೆ ಮರಳಲು ಇದು ಸೂಕ್ತ ಸಮಯವಲ್ಲ
- ವಿಜಯ ಮಲ್ಯ, ಮದ್ಯ ದೊರೆ

ರಾಜಕಾರಣಿಗಳ ಜೊತೆಗಿನ ವ್ಯವಹಾರ ಇನ್ನೂ ಕುದುರಿಲ್ಲವೇ?
---------------------

 ಜನತೆಯ ಕನಸುಗಳು ಸಾಕಾರವಾದಾಗ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರಕ್ಕೆ ನಿಜವಾದ ಅರ್ಥ ಬರುತ್ತದೆ
- ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸದಸ್ಯ

ನಿಮ್ಮಂತಹ ವೃದ್ಧ ನಾಯಕರಿಂದ ಕಾಂಗ್ರೆಸ್‌ಗೆ ಸ್ವಾತಂತ್ರ ಯಾವಾಗ?
---------------------

ಬಿಜೆಪಿ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವ ಕಾರ್ಖಾನೆ

- ವಿನಯ ಕುಮಾರ್ ಸೊರಕೆ, ಸಚಿವ

ಅದನ್ನು ಮಾರುಕಟ್ಟೆಗೆ ಕೊಂಡೊಯ್ದು ವಿತರಿಸುವ ಗುತ್ತಿಗೆಯನ್ನು ನೀವೇ ಪಡೆದುಕೊಂಡಿದ್ದೀರಿ ಎನ್ನೋದು ಸುಳ್ಳು ಸುದ್ದಿಯೇ?

---------------------

ಗಿಡ ಬೆಳೆಸಿದರೆ ಬಹಿರಂಗ ಶುದ್ಧಿ

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಮರದಡಿಯಲ್ಲಿ ಕುಳಿತು ಬಹಿರಂಗ ಶುದ್ಧಿ ಮಾಡಿದರೆ, ಮೋದಿಯ ಸ್ವಚ್ಛತಾ ಆಂದೋಲನದ ಗತಿಯೇನಾಗಬೇಕು?

---------------------

ಆರೆಸ್ಸೆಸ್‌ನ ಚಡ್ಡಿ ಬದಲು ಪ್ಯಾಂಟ್ ನಿರ್ಧಾರಕ್ಕೆ ನಾನೇ ಕಾರಣ

- ರಾಬ್ಡಿದೇವಿ, ಬಿಹಾರ ಮಾಜಿ ಮುಖ್ಯಮಂತ್ರಿ

 ನಿಮ್ಮ ಮುಂದೆ ಚಡ್ಡಿಯಲ್ಲಿ ಓಡಾಡುವುದಕ್ಕೆ ಆರೆಸ್ಸೆಸ್ ನಾಯಕರಿಗೆ ಮುಜುಗರವಂತೆ.
---------------------

ಕುತ್ತಿಗೆಗೆ ಚಾಕು ಇಟ್ಟರೂ ‘ಭಾರತ್ ಮಾತಾ ಕೀ ಜೈ’ ಎನ್ನಲ್ಲ
- ಅಸದುದ್ದೀನ್ ಉವೈಸಿ, ಸಂಸದ

ಸೂಟ್‌ಕೇಸ್ ಕೊಟ್ಟರೆ ಅದೇನು ಹೇಳುವುದಕ್ಕೂ ಸಿದ್ಧರಿದ್ದೀರಾ?

---------------------

ಒಂದು ಪೊಲೀಸ್ ಠಾಣೆ ಆಗಬೇಕಾದರೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಅಪರಾಧದ ಸಂಖ್ಯೆ ಜಾಸ್ತಿ ಇರಬೇಕು 

- ಡಾ.ಜಿ.ಪರಮೇಶ್ವರ್, ಗೃಹ ಸಚಿವ

ಅಂದರೆ ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕುವ ಯೋಚನೆಯೇ?

---------------------

ನಾನು ಹಂದಿ ಮಾಂಸ ಕೊಟ್ಟರೂ ತಿನ್ನುತ್ತೇನೆ

- ತಸ್ಲೀಮಾ ನಸ್ರೀನ್, ವಿವಾದಿತ ಬಾಂಗ್ಲಾ ಲೇಖಕಿ
     

ಅದೇನು ಬೇಕಾದರೂ ತಿನ್ನಿ, ಆದರೆ ಬೇಯಿಸಿ ತಿನ್ನಿ.

---------------------

ಸಲಿಂಗ ಕಾಮ ಅಪರಾಧವಲ್ಲ

- ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ

ತಮ್ಮ ಈ ತೀರ್ಪಿಗೆ ಆರೆಸ್ಸೆಸ್‌ನ ಹಲವು ನಾಯಕರು ನಿಟ್ಟುಸಿರು ಬಿಟ್ಟಿರಬೇಕು.

---------------------

ಅಲ್ಲಾಹುವಿನ 99 ಹೆಸರುಗಳಲ್ಲಿ ಯಾವುದೂ ಹಿಂಸೆಯನ್ನು ಸೂಚಿಸುವುದಿಲ್ಲ

- ನರೇಂದ್ರ ಮೋದಿ, ಪ್ರಧಾನಿ

ಉಳಿದ ಯಾವ ದೇವರ ಹೆಸರು ಹಿಂಸೆಯನ್ನು ಸೂಚಿಸುತ್ತದೆ ಎನ್ನುವುದನ್ನು ಹೇಳಬಹುದೇ?
---------------------

 ಅಮಿತಾಭ್ ಬಚ್ಚನ್‌ರನ್ನು ಭಾರತದ ಮುಂದಿನ ರಾಷ್ಟ್ರಪತಿಯಾಗಿ ನೇಮಿಸಬೇಕು

- ಶತ್ರುಘ್ನ ಸಿನ್ಹಾ, ಬಿಜೆಪಿ ನಾಯಕ
     
ನರೇಂದ್ರ ಮೋದಿಯ ನಟನೆಗೆ ಸರಿಗಟ್ಟಲಾರರು ಬಿಡಿ.

---------------------

‘ದೇಶದ್ರೋಹ’ದ ಕಾನೂನಿನ ಮರುಪರಿಶೀಲನೆ ಅಗತ್ಯವಿದೆ

- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

 ಗೋಡ್ಸೆಯನ್ನು ಹುತಾತ್ಮನಾಗಿಸುವುದಕ್ಕೆ ಪೂರಕವಾಗಿ ಮರುಪರಿಶೀಲನೆಯೇ?

---------------------

ಯಡಿಯೂರಪ್ಪರನ್ನು ಮುಗಿಸಲು ಬಿಜೆಪಿಯಲ್ಲೇ ಸಂಚು

- ಬಸವನಗೌಡ ಪಾಟೀಲ ಯತ್ನಾಳ್, ವಿ.ಪ. ಸದಸ್ಯ

ಅವರು ಈಗಾಗಲೇ ಮುಗಿದಿದ್ದಾರೆ ಎನ್ನುವುದು ಈಶ್ವರಪ್ಪರ ನಂಬಿಕೆ.

---------------------

ವಿಜಯ ಮಲ್ಯಗೆ ಕೊಟ್ಟ ಪ್ರತಿ ಪೈಸೆಯನ್ನೂ ಬ್ಯಾಂಕುಗಳು ವಸೂಲಿ ಮಾಡುವುದು ಖಚಿತ

- ಅರುಣ್ ಜೇಟ್ಲಿ, ಕೇಂದ್ರ ಸಚಿವ

ಬರೇ ಪೈಸೆಯನ್ನು ವಸೂಲಿ ಮಾಡಿ, ಕೋಟಿಯನ್ನು ಮನ್ನಾ ಮಾಡುವ ಯೋಜನೆಯೇ?

---------------------

ಪತಂಜಲಿ ಸಂಸ್ಥೆಯ ಸ್ಪರ್ಧೆಯಿಂದ ವಿದೇಶಿ ಕಂಪೆನಿಗಳು ಶೀರ್ಷಾಸನ ಹಾಕಿವೆ

- ಬಾಬಾ ರಾಮ್‌ದೇವ್, ಯೋಗ ಗುರು

ನಿಮ್ಮ ಔಷ ಕುಡಿದವರು ಶವಾಸನ ಹಾಕಿರುವ ಸುದ್ದಿಗಳು ಬರುತ್ತಿವೆ.

---------------------

ಶ್ರೀಮಂತ ಸನಾತನ ಪರಂಪರೆ ಹೊಂದಿರುವ ಭಾರತದಲ್ಲಿ ಹಿಟ್ಲರ್ ಉದ್ಭವವಾಗಲು ಸಾಧ್ಯವಿಲ್ಲ

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X