ಮಂಗಳೂರು: 16 ಲಕ್ಷ ವೌಲ್ಯದ ಗಾಂಜ ನಾಶ

ಮಂಗಳೂರು,ಮಾ.21: ಅಬಕಾರಿ ಇಲಾಖೆ 2008ರಿಂದ 17 ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 16 ಲಕ್ಷ ವೌಲ್ಯದ ಗಾಂಜಾ,ಹೆರಾಯಿನ್, ಬ್ರೌನ್ ಶುಗರ್, ಚರಸನ್ನು ಇಂದು ನಗರದ ನೆಹರು ಮೈದಾನದಲ್ಲಿ ಬೆಂಕಿ ಕೊಟ್ಟು ನಾಶ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಗಾಂಜಾ,ಹೆರಾಯಿನ್, ಬ್ರೌನ್ ಶುಗರ್, ಚರಸ್ ಆರೋಗ್ಯಕ್ಕೆ ಹಾನಿಕಾರವಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಬೇಕೆಂಬ ದೃಷ್ಟಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ನಾಶ ಮಾಡಲಾಗಿದೆ ಎಂದು ಹೇಳಿದರು.
6 ಕೆ.ಜಿ 840 ಗ್ರಾಂ ಗಾಂಜಾ, 960 ಗ್ರಾಂ ಹೆರಾಯಿನ್, 950 ಗ್ರಾಂ ಬ್ರೌನ್ ಶುಗರ್ ಮತ್ತು 1 ಕೆ.ಜಿ 130 ಗ್ರಾಂ ಚರಸನ್ನು ನ್ಯಾಯಾಲಯದ ಆದೇಶದಂತೆ ನಾಶ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶೆ ಉಮಾ ಎಂ.ಜಿ, ಅಬಕಾರಿ ಉಪ ಆಯುಕ್ತ ಎಲ್.ಎ. ಮಂಜುನಾಥ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್ .ಎಂ, ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಮೊದಲಾದವರು ಉಪಸ್ಥಿತರಿದ್ದರು







