ಕ್ಯಾನ್ಸರ್ ಕೆಲವೇ ವಾರಗಳಲ್ಲಿ ಗುಣಪಡಿಸಬಹುದು ! ಡಾ. ಲಿಯೋನಾರ್ಡ್ ಕೋಲ್ಡ್ ವೆಲ್ ವಾದ

ಇದು ಆಧುನಿಕ ವೈದ್ಯಕೀಯ ಲೋಕದಲ್ಲಿ ಅಧಿಕೃತವಾಗಿ ಸಾಬೀತಾದ ವಾದವಲ್ಲ. ಆದರೆ ಹೀಗೂ ಒಂದು ವಾದ ಇದೆ ಎಂಬುದು ಜನರ ಗಮನಕ್ಕೆ ಬರಬೇಕು ಎಂಬ ಉದ್ದೇಶದಿಂದ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಇಂದು ಬಹುದೊಡ್ಡ ಸಂಖ್ಯೆಯ ಜನರು ಕ್ಯಾನ್ಸರ್ ಮಾರಿಗೆ ಬಲಿಯಾಗುತ್ತಿದ್ದಾರೆ. ಅದಕ್ಕೆ ಯಾರು ಚಿಕಿತ್ಸೆ ಕಂಡು ಹಿಡಿಯುತ್ತಾರೆ ಎಂದು ಇಡೀ ಲೋಕವೇ ಕಾಯುತ್ತಿದೆ. ಈಗಿರುವ ಚಿಕಿತ್ಸಾ ಪದ್ಧತಿ ಅತಿ ದುಬಾರಿ. ಆದರೂ ಅದರಲ್ಲಿ ಗುಣಮುಖವಾಗುವ ಖಾತರಿಯೂ ಇಲ್ಲ.
ಇತ್ತೀಚಿಗೆ ನನಗೆ ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ವಿಷಯ ಕಣ್ಣಿಗೆ ಬಿತ್ತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಡಾ. ಲಿಯೋನಾರ್ಡ್ ಕೋಲ್ಡ್ ವೆಲ್ ಎಂಬವರ ಪ್ರಕಾರ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿಲ್ಲದ ಕಾಯಿಲೆಯಲ್ಲ. " ಸರಿಯಾದ ಚಿಕಿತ್ಸೆ " ನೀಡಿದರೆ ಅದನ್ನು ಕೆಲವೇ ವಾರಗಳಲ್ಲಿ ಗುಣಪಡಿಸಬಹುದು. ಕೆಲವು ಕ್ಯಾನ್ಸರ್ ಗಳನ್ನೂ ಕೆಲವೇ ನಿಮಿಷಗಳಲ್ಲೂ ಗುಣಪಡಿಸಬಹುದು ! ಈಗ ಸಾಮಾನ್ಯವಾಗಿ ಜಾಗತಿಕವಾಗಿ ಬಳಕೆಯಲ್ಲಿರುವ ಕೀಮೊತೆರಪಿ ಹಾಗು ರೇಡಿಯೇಶನ್ ಚಿಕಿತ್ಸೆ ಕ್ಯಾನ್ಸರ್ ಗುಣಪಡಿಸಲು ಅಗತ್ಯವೇ ಇಲ್ಲ ಎಂಬುದು ಡಾ. ಡಾ. ಲಿಯೋನಾರ್ಡ್ ಅವರ ಸ್ಪಷ್ಟ ಅಭಿಪ್ರಾಯ. ಸ್ವಾಭಾವಿಕ ಚಿಕಿತ್ಸೆ ಹಾಗು ರೋಗಿಯ ಧನಾತ್ಮಕ ಚಿಂತನೆ, ಆತ್ಮ ವಿಶ್ವಾಸಗಳ ಮೂಲಕ ಕ್ಯಾನ್ಸರ್ ಅನ್ನು ಗೆಲ್ಲಬಹುದು ಎಂಬುದು ಡಾ. ಲಿಯೋನಾರ್ಡ್ ಅವರ ಚಿಕಿತ್ಸಾ ಮಂತ್ರ.
ದೇಹದಲ್ಲಿ ಕ್ಷಾರೀಯ (alkaline ) ಮಟ್ಟ ಹೆಚ್ಚಿಸುವ ಮೂಲಕ ಕ್ಯಾನ್ಸರ್ ಬೆಳವಣಿಗೆ ತಡೆಯಬಹುದು. ಇದಕ್ಕೆ ಹೆಚ್ಚೆಚ್ಚು ತರಕಾರಿ ತಿನ್ನಬೇಕು ಹಾಗು ದೇಹಕ್ಕೆ ಆಮ್ಲಜನಕ ನೀಡುವ ಇತರ ಆಹಾರ ಪದಾರ್ಥಗಳನ್ನು ತಿನ್ನಬೇಕು. ದೇಹದ Ph ಪ್ರಮಾಣ ಸೊನ್ನೆಯಿಂದ 14 ರವರೆಗೆ ಇರುತ್ತದೆ. ಸೊನ್ನೆಯಿಂದ 7 ರವರೆಗೆ ಆಮ್ಲೀಯ (acidic) ಮಟ್ಟ . 7 ರಿಂದ 14 ರವೆರೆಗೆ ಕ್ಷಾರೀಯ (alkaline) ಮಟ್ಟ. ದೇಹದ Ph ಪ್ರಮಾಣ 7 ತಲುಪಿದರೆ ಅದು ಕ್ಷಾರೀಯ ಮಟ್ಟ . ಅದು 7.36 ಆದರೆ ಅತ್ಯುತ್ತಮ ಮಟ್ಟ . ಈ ಅವಸ್ಥೆಯಲ್ಲಿ ಕ್ಯಾನ್ಸರ್ ಬೆಳೆಯುವುದಿಲ್ಲ ಎಂಬುದು ಡಾ. ಲಿಯೋನಾರ್ಡ್ ಅವರ ವಾದ. ಇದರ ಜೊತೆಗೆ ವಿಟಮಿನ್ ಸಿ ಚುಚ್ಚುಮದ್ದು ನೀಡುವುದು ಹಾಗು ದೇಹದ ಸಂಪೂರ್ಣ ರಕ್ತವನ್ನು ಶುದ್ದೀಕರಿಸುವುದು ಡಾ. ಲಿಯೋನಾರ್ಡ್ ಚಿಕಿತ್ಸಾ ವಿಧಾನದಲ್ಲಿ ಸೇರಿದೆ.
ಆದರೆ ಡಾ. ಲಿಯೋನಾರ್ಡ್ ಅವರ ಈ ವಾದವನ್ನು ಹೆಚ್ಚಿನ ಆಧುನಿಕ ವೈದ್ಯರು ಹಾಗು ವೈದ್ಯ ಲೋಕ ಸಾರಾಸಗಟಾಗಿ ನಿರಾಕರಿಸುತ್ತದೆ. ಇದು ಸಂಪೂರ್ಣ ನಿರಾಧಾರ ಎಂದು ತಿರಸ್ಕರಿಸುತ್ತದೆ. ಈ ತಿರಸ್ಕಾರವನ್ನು ತಿರಸ್ಕರಿಸುವ ಡಾ. ಲಿಯೋನಾರ್ಡ್ " ಇದು ಕ್ಯಾನ್ಸರ್ ನ ಹೆಸರಲ್ಲಿ ಹಣ ಮಾಡುತ್ತಿರುವ ಔಷಧ ಕಂಪೆನಿಗಳ ಹುನ್ನಾರ. ಅವರು ಸತ್ಯ ಹೊರಬರಲು ಬಯಸುವುದಿಲ್ಲ " ಎನ್ನುತ್ತಾರೆ.
ಡಾ. ಲಿಯೋನಾರ್ಡ್ ಅವರ ವಾದ ಸರಿಯೇ ಆಗಿದ್ದರೆ ಅದು ಆದಷ್ಟು ಬೇಗ ಸಾರ್ವತ್ರಿಕವಾಗಿ ಜಾರಿಗೆ ಬರಬೇಕಾಗಿದೆ. ಆದರೆ ಅದನ್ನು ಪರೀಕ್ಷೆಗೆ ಹಚ್ಚಿ ಖಚಿತಪಡಿಸುವ ಅಥವಾ ತಿರಸ್ಕರಿಸುವ ಕೆಲಸವನ್ನು ಯಾರು ಮಾಡುತ್ತಾರೆ ಎಂಬುದೇ ಈಗಿರುವ ಪ್ರಶ್ನೆ ! ಈ ವಿಷಯದಲ್ಲಿ ತಿಳಿದವರು, ವೈದ್ಯರು ಆರೋಗ್ಯಕರ ಚರ್ಚೆ ನಡೆಸಬೇಕಾಗಿದೆ. ತಿಳಿದವರು ಉತ್ತರಿಸುವಿರಾಗಿ ಆಶಿಸುತ್ತೇನೆ.
ಇದಕ್ಕೆ ಸಂಬಂಧಿಸಿ ಸಿಕ್ಕಿದ ವೀಡಿಯೋ ಇಲ್ಲಿದೆ :







