ಟ್ವೆಂಟಿ-20 ವಿಶ್ವಕಪ್ :ಬಾಂಗ್ಲಾವನ್ನು ಮಣಿಸಿದ ಆಸೀಸ್
ಖ್ವಾಜಾ ಅರ್ಧಶತಕ

ಬೆಂಗಳೂರು, ಮಾ.21: ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಸೂಪರ್ -10 ಗ್ರೂಪ್ 2ರ ಪಂದ್ಯದಲ್ಲಿ ಇಂದು ಬಾಂಗ್ಲಾ ವಿರುದ್ದ ಆಸ್ಟ್ರೇಲಿಯ 3 ವಿಕೆಟ್‌ಗಳ ಜಯ ಗಳಿಸಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 157 ರನ್‌ಗಳ ಸವಾಲು ಪಡೆದ ಆಸ್ಟ್ರೇಲಿಯ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿ ಗೆಲುವಿನ ದಡ ಸೇರಿತು.
ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ 58ರನ್( 45 ಎ, 7ಬೌ, 1ಸಿ), ಶೇನ್ ವ್ಯಾಟ್ಸನ್ 21 ರನ್, ನಾಯಕ ಸ್ಟೀವ್ ಸ್ಮಿತ್ 14 ರನ್ ,ಡೇವಿಡ್ ವಾರ್ನರ್ 17 ರನ್, ಮ್ಯಾಕ್ಸ್‌ವೆಲ್ 26ರನ್, ಮಿಚೆಲ್ ಮಾರ್ಷ್ 6ರನ್ , ಫಾಕ್ನರ್ ಔಟಾಗದೆ5 ರನ್ ಗಳಿಸಿದರು.
ಬಾಂಗ್ಲಾದೇಶ 156/5: ಬಾಂಗ್ಲಾ ದೇಶ ತಂಡ ಆಸ್ಟ್ರೇಲಿಯ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 156 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡ ಝಂಪಾ (23ಕ್ಕೆ 3)ಮತ್ತು ಶೇನ್ ವ್ಯಾಟ್ಸನ್ (31ಕ್ಕೆ 2) ದಾಳಿಗೆ ಸಿಲುಕಿ ಆರಂಭದಲ್ಲಿ ರನ್ ಗಳಿಸಲು ಪರದಾಡಿದರೂ ಬಳಿಕ ಚೇತರಿಸಿಕೊಂಡಿತು.
ಮಹ್ಮೂದುಲ್ಲಾ ಔಟಾಗದೆ 49 ರನ್(29ಎ, 7ಬೌ,1ಸಿ) ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಶಾಕಿಬ್ ಅಲ್ ಹಸನ್ (33), ಮುಹಮ್ಮದ್ ಮಿಥುನ್(23), ಶುವಾಗತಾ ಹೊಮ್ (13), ಮುಶ್ಫಿಕುರ್ರಹೀಮ್ (ಔಟಾಗದೆ 15) ಮತ್ತು ಶಬ್ಬೀರ್ ರಹ್ಮಾನ್ (12)ಎರಡಂಕೆಯ ಕೊಡುಗೆ ನೀಡಿ ತಂಡದ ಸ್ಕೋರ್‌ನ್ನು ಏರಿಸಿದರು. ಆರಂಭಿಕ ದಾಂಡಿಗ ಸೌಮ್ಯ ಸರ್ಕಾರ್ (1) ವಿಫಲರಾದರು.








