‘ನ್ಯಾನೋ ಸೈನ್ಸ್ ಮತ್ತು ನ್ಯಾನೊ ತಂತ್ರಜ್ಞಾನ’ ಕುರಿತು ಕಾರ್ಯಾಗಾರ

ಮೂಡುಬಿದಿರೆ, ಮಾ.21: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಬೆಂಗಳೂರಿನ ವಿಜ್ಞಾನ ಅಕಾಡಮಿಗಳು, ಸೆಂಟರ್ ಫಾರ್ ನ್ಯಾನೊ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸ್‌ನ ಪ್ರಾಯೋಜಕತ್ವದಲ್ಲಿ ‘ನ್ಯಾನೋ ಸೈನ್ಸ್ ಮತ್ತು ನ್ಯಾನೊ ತಂತ್ರಜ್ಞಾನ’ ಕುರಿತು ಉಪನ್ಯಾಸ ಕಾರ್ಯಾಗಾರವು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ನಿರ್ದೇಶಕ ಪ್ರೊ.ಜಿ. ಯು. ಕುಲಕರ್ಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ನ್ಯಾನೋ ಸೈನ್ಸ್ ಮತ್ತು ನ್ಯಾನೋ ತಂತ್ರಜ್ಞಾನದ ಉಪಯೋಗ ಹೊಂದಲು ಜ್ಞಾನದ ಹಂಚುವಿಕೆಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದ ಉಪಯೋಗಗಳ ಬಗ್ಗೆ ವಿವರಿಸಿದರು. ಅಮೆರಿಕದ ಪುರುಡ್ಯು ವಿಶ್ವವಿದ್ಯಾನಿಲಯದ ಪ್ರೊ. ತಿಮೋತಿ ಫಿಶರ್, ನ್ಯಾನೊ ವಿಜ್ಞಾನ ಕಲಿಕೆಯಲ್ಲಿ ಮೂಲವಿಜ್ಞಾನದ ಮಹತ್ವವನ್ನು ವಿವರಿಸಿದರು.
ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಸಂತೋಶ್ ಆಚಾರ್ಯ ಸ್ವಾಗತಿಸಿದರು. ಸಹ ಪಾಧ್ಯಾಪಕ ಡಾ. ರಾಮಪ್ರಸಾದ್ ಎ.ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ರಾಜೇಶ್ ಕುಮಾರ್ ವಂದಿಸಿದರು. ಅಮೃತಾ ಕಾರ್ಯಕ್ರಮ ನಿರೂಪಿಸಿದರು.





