ಬ್ರಹ್ಮಾವರ: ಅಣಬೆ ಬೇಸಾಯ ತರಬೇತಿ

ಉಡುಪಿ, ಮಾ.21: ಕೃಷಿಯ ಜೊತೆಗೆ ಅಣಬೆ ಬೇಸಾಯ ಪದ್ಧತಿಯನ್ನು ಅನುಸರಿಸಬಹುದು. ಇದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದುಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ ಹೇಳಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಣಬೆ ಬೇಸಾಯದ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ನವಿಲೆಯ ಸಹಾಯಕ ಪ್ರಾಧ್ಯಾಪಕ (ಸೂಕ್ಷ್ಮ ಜೀವಾಣು ಶಾಸ್ತ್ರ) ಡಾ.ನಂದೀಶ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬ್ರಹ್ಮಾವರ ಕೆವಿಕೆಯ ಕಾರ್ಯಕ್ರಮ ಸಂಯೋಜಕ ಡಾ.ಬಿ.ಧನಂಜಯ ಮಾತನಾಡಿದರು.
ವಿಷಯತಜ್ಞ ಡಾ.ಸತೀಶ್ ಎನ್. ಸ್ವಾಗತಿಸಿದರು. ತರಬೇತಿ ಸಹಾಯಕ ಸಂಜೀವ್ ಕ್ಯಾತಪ್ಪ ವಂದಿಸಿದರು.
Next Story





