ಸಂಕಷ್ಟದಲ್ಲಿ ರಂಗಭೂಮಿ ಶಾಸಕ ಎಚ್.ಕೆ.ಕೆ ಆತಂಕ
ಹಾಸನ, ಮಾ.21: ರಂಗಭೂಮಿ ಮತ್ತು ನಾಟಕ ಕಲೆಗಳು ಆಧುನಿಕ ಮನೋರಂಜನೆಯಿಂದಾಗಿ ಸಂಕಷ್ಟದಲ್ಲಿವೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ತಾಲೂಕಿನ ಸಿಗೂರು ಗ್ರಾಮದಲ್ಲಿ ಚಾಮುಂಡೇಶ್ವರಿ ವಾಲ್ಮಿಕಿ ನಾಯಕ ಜನಾಂಗದ ಜನಪದ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಂಸ್ಕೃತಿಕ ಕಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ಸತ್ಯ ಹರಿಶ್ವಂದ್ರ ನಾಟಕವನ್ನು ನೋಡಿ ಗಾಂಧೀಜಿಯವರ ವ್ಯಕ್ತಿತ್ವ ಬದಲಾವಣೆಯಾಯಿತು ಎಂದು ತಿಳಿಸಿದ ಅವರು, ನಾಟಕಗಳು ಮನುಷ್ಯನ ಸಾಮಾಜಿಕ ಬದಲಾವಣೆಗೆ ತುಂಬ ಸಹಕಾರಿಯಾಗುತ್ತವೆ ಎಂದು ಹೇಳಿದರು.ಸಂದರ್ಭದಲ್ಲಿ ಕಲಾವಿದರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಸುಧಾ ಎಸ್.ದ್ಯಾವೇಗೌಡ, ಸಂಘದ ಅಧ್ಯಕ್ಷೆ ಕವಿತಾ, ಸಮಾಜಸೇವಕ ಪ್ರಮೋದ್, ತಾಪಂ ಸದಸ್ಯ ಶೋಭಚಂದ್ರು, ವಾಲ್ಮಿಕಿ ನಿಗಮದ ತಾಲೂಕು ಅಭಿವೃದ್ಧ್ದಿ ಅಧಿಕಾರಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





