ರೇವ್ ಪಾರ್ಟಿ ಮೇಲೆ ದಾಳಿ
ಐವರ ಬಂಧನ: ಏಳು ಮಂದಿ ಯುವತಿಯರ ರಕ್ಷಣೆ
ಮಾಲೂರು, ಮಾ.21: ಪಟ್ಟಣದ ಮಾಲೂರು-ಹೊಸೂರು ಮುಖ್ಯ ರಸ್ತೆಯಲ್ಲಿರುವ ಆರ್.ಜಿ ಹೊಟೇಲ್ ರೆಸಾರ್ಟ್‌ನಲ್ಲಿ ರವಿವಾರ ರಾತ್ರಿ ರೇವ್‌ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಐವರನ್ನು ಬಂಧಿಸಿ, ಏಳು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ ಎಂದುತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ನಾಗರಾಜ್, ಮೀರಾವಳಿ, ಧೀರಜ್‌ರೆಡ್ಡಿ, ಕ್ರಾಂತಿಕುಮಾರ್ ಹಾಗೂ ರೆಸಾರ್ಟ್‌ನ ಮ್ಯಾನೇಜರ್ ಪ್ರಕಾಶ್ ಎಂದು ಗುರುತಿಸಲಾಗಿದೆ. ಇವರು ಆಂಧ್ರ ಮೂಲದ ಯುವತಿಯರನ್ನು ಕೆಲಸ ಕೊಡಿಸುವ ಹಾಗೂ ಹೆಚ್ಚು ಹಣ ನೀಡುವ ಆಮಿಷವೊಡ್ಡಿ ರೆವ್‌ಪಾರ್ಟಿ ಮಾಡುತ್ತಿದ್ದರು ಎಂದು ಮೇಲ್ನೋಟಕ್ಕೆ ಖಾತ್ರಿಯಾಗಿದ್ದು, ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಡಿವೈಎಸ್ಪಿ ಅಬ್ದುಲ್ ಸತ್ತಾರ್, ಸಿ.ಪಿ.ಐ ರಾಘವೇಂದ್ರನ್, ಸಬ್ ಇನ್ಸ್‌ಪೆಕ್ಟರ್ ಎಂ.ಎಲ್.ಚೇತನ್‌ಕುಮಾರ್ ಮತ್ತು ತಂಡ ಭಾಗವಹಿಸಿತ್ತು.
Next Story





