ಸರ್ದಾರ್ ಸಾರಥ್ಯದ ಭಾರತ ತಂಡ ಪ್ರಕಟ
ಸುಲ್ತಾನ್ ಅಝ್ಲಾನ್ ಷಾ ಹಾಕಿ ಕಪ್ ಟೂರ್ನಿ
ಹೊಸದಿಲ್ಲಿ, ಮಾ.21: ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ 25ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಷಾ ಹಾಕಿ ಕಪ್ ಟೂರ್ನಿಗೆ ಸೋಮವಾರ ಹಾಕಿ ಇಂಡಿಯಾ ಸರ್ದಾರ್ ಸಿಂಗ್ ನಾಯಕತ್ವದಲ್ಲಿ 18ರ ಸದಸ್ಯರನ್ನು ಒಳಗೊಂಡ ಭಾರತೀಯ ತಂಡವನ್ನು ಪ್ರಕಟಿಸಿದೆ.
ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿಯು ಎ.6 ರಿಂದ 16ರ ವರೆಗೆ ನಡೆಯುವುದು. ಟೂರ್ನಿಯಲ್ಲಿ ಭಾರತವಲ್ಲದೆ ನ್ಯೂಝಿಲೆಂಡ್, ಆಸ್ಟ್ರೇಲಿಯ, ಪಾಕಿಸ್ತಾನ, ಜಪಾನ್, ಕೆನಡಾ ಹಾಗೂ ಆತಿಥೇಯ ಮಲೇಷ್ಯಾ ಭಾಗವಹಿಸಲಿದೆ.
ಭಾರತ ತಂಡಕ್ಕೆ ಸರ್ದಾರ್ ಸಿಂಗ್ ನಾಯಕನಾಗಿದ್ದರೆ, ಕನ್ನಡಿಗ ಎಸ್‌ವಿ ಸುನೀಲ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ಗೋಲುಕೀಪರ್‌ಗಳಲ್ಲದೆ, ಐವರು ಡಿಫೆಂಡರ್‌ಗಳು ಇದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿಯು ಅತ್ಯಂತ ಪ್ರಮುಖವಾಗಿದೆ. ಟೂರ್ನಿಗೆ ಸಜ್ಜಾಗಲು ಬೆಂಗಳೂರಿನ ಸಾಯ್ ಸೆಂಟರ್‌ನಲ್ಲಿ ಮಾ.7 ರಿಂದ ಭಾರತ ತರಬೇತಿ ನಡೆಸುತ್ತಿದೆ.
ಅಝ್ಲನ್ ಷಾ ಹಾಕಿ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಭಾರತ ಈ ಪ್ರತಿಷ್ಠಿತ ಟೂರ್ನಿಯನ್ನು 1985, 91, 95, 2009 ಹಾಗೂ 2010ರ ಸಹಿತ ಒಟ್ಟು ಐದು ಬಾರಿ ಜಯಿಸಿದೆ. ಆರು ಬಾರಿ ಕಂಚಿನ ಪದಕ ಜಯಿಸಿದೆ. 2008ರಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದುಕೊಂಡಿತ್ತು.
ಭಾರತದ ಹಾಕಿ ತಂಡ:
ಗೋಲ್‌ಕೀಪರ್‌ಗಳು: ಹರ್ಜೋತ್ ಸಿಂಗ್, ಆಕಾಶ್ ಅನಿಲ್ ಚಿಕ್ಟೆ.
ಡಿಫೆಂಡರ್‌ಗಳು: ರೂಪಿಂದರ್‌ಪಾಲ್ ಸಿಂಗ್, ಜಸ್ಜಿತ್ ಸಿಂಗ್, ಕೊಥಜಿತ್ ಸಿಂಗ್, ಸುರೇಂದರ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್.
ಮಿಡ್‌ಫೀಲ್ಡರ್‌ಗಳು: ದಾನಿಶ್ ಮುಜ್ತಬ, ಚಿಂಗ್ಲೆಸನಾ ಸಿಂಗ್, ಮನ್‌ಪ್ರೀತ್ ಸಿಂಗ್, ಸರ್ದಾರ್ ಸಿಂಗ್, ಎಸ್.ಕೆ. ಉತ್ತಪ್ಪ, ಹರ್ಜೀತ್ ಸಿಂಗ್.
ಫಾರ್ವಡ್‌ಗಳು: ತಲ್ವಿಂದರ್ ಸಿಂಗ್, ಮನ್‌ದೀಪ್ ಸಿಂಗ್, ಎಸ್.ವಿ. ಸುನೀಲ್, ರಮನ್‌ದೀಪ್ ಸಿಂಗ್, ನಿಖಿನ್ ತಿಮ್ಮಯ್ಯ.







